Job Description: ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದಲ್ಲಿ ಹೊಸದಾಗಿ 10 ಮಂದಿ ಸಚಿವರಿಗೆ ಅವಕಾಶ ನೀಡಲಾಗಿದ್ದು ಸೋಮವಾರ ಬಿ.ಎಸ್ ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿದ್ದಾರೆ. ಯಾವ ಸಚಿವರಿಗೆ ಯಾವ ಯಾವ ಖಾತೆ : -ಬಿ.ಎಸ್ ಯಡಿಯೂರಪ್ಪ (ಸಿಎಂ): ಹಣಕಾಸು, ಇಂಧನ, ಬೆಂಗಳೂರು ನಗರ ಅಭಿವೃದ್ಧಿ, ವಾರ್ತಾ ಇಲಾಖೆ, ಗುಪ್ತವಾರ್ತೆ ಸೇರಿದಂತೆ ಹಂಚಿಕೆಯಾಗದೇ ಉಳಿದ ಖಾತೆಗಳು -ಕಾರಜೋಳ (ಡಿಸಿಎಂ): ಲೋಕೋಪಯೋಗಿ, ಸಮಾಜ ಕಲ್ಯಾಣ -ಆಶ್ವತ್ಥನಾರಾಯಣ (ಡಿಸಿಎಂ): ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ -ಲಕ್ಷ್ಮಣ ಸವದಿ (ಡಿಸಿಎಂ): ಸಾರಿಗೆ -ಈಶ್ವರಪ್ಪ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ -ಆರ್.ಅಶೋಕ: ಕಂದಾಯ -ಜಗದೀಶ ಶೆಟ್ಟರ್: ಬೃಹತ್ -ಮಧ್ಯಮ ಕೈಗಾರಿಕೆ -ಶ್ರೀರಾಮುಲು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ -ಎಸ್ ಸುರೇಶ್ ಕುಮಾರ್: ಪ್ರಾಥಮಿಕ-ಪ್ರೌಢ ಶಿಕ್ಷಣ ಮತ್ತು ಸಕಾಲ -ಸಿ.ಟಿ ರವಿ: ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ -ಬಸವರಾಜ ಬೊಮ್ಮಾಯಿ: ಗೃಹ -ಕೋಟ ಶ್ರೀನಿವಾಸ ಪೂಜಾರಿ: ಮುಜರಾಯಿ, ಮೀನುಗಾರಿಕೆ, ಬಂದರ ಮತ್ತು ಒಳನಾಡು ಸಾರಿಗೆ -ಜೆ-ಸಿ ಮಾಧುಸ್ವಾಮಿ: ಕಾನೂನು ಮತ್ತು ಸಂಸದೀಯ ವ್ಯವಹಾರ -ಸಿ.ಸಿ ಪಾಟೀಲ: ಗಣಿ ಮತ್ತು ಭೂವಿಜ್ಞಾನ -ಪ್ರಭು ಚೌವ್ಹಾಣ್: ಪಶು ಸಂಗೋಪನೆ -ಶಶಿಕಲಾ ಜೊಲ್ಲೆ: ಮಹಿಳೆ ಮತ್ತು ಮಕ್ಕಳ ಕಲ್ಯಾಣ ಇಲಾಖೆ -ಎಚ್. ನಾಗೇಶ್: ಅಬಕಾರಿ -ರಮೇಶ್ ಜಾರಕಿಹೊಳಿ: ಜಲಸಂಪನ್ಮೂಲ -ಎಸ್.ಟಿ ಸೋಮಶೇಖರ್: ಸಹಕಾರ -ಶಿವರಾಮ ಹೆಬ್ಬಾರ್: ಕಾರ್ಮಿಕ -ನಾರಾಯಣಗೌಡ: ತೋಟಗಾರಿಗೆ, ಪೌರಾಡಳಿತ -ಬೈರತಿ ಬಸವರಾಜು: ನಗರಾಭಿವೃದ್ಧಿ -ಕೆ. ಸುಧಾಕರ್: ವೈದ್ಯಕೀಯ ಶಿಕ್ಷಣ -ಬಿ.ಸಿ ಪಾಟೀಲ: ಅರಣ್ಯ -ಶ್ರೀಮಂತ ಪಾಟೀಲ: ಜವಳಿ -ಗೋಪಾಲಯ್ಯ: ಸಣ್ಣ ಕೈಗಾರಿಕೆ -ಆನಂದ್ ಸಿಂಗ್: ಆಹಾರ ಮತ್ತು ನಾಗರಿಕ ಪೂರೈಕೆ -ಸೋಮಣ್ಣ: ವಸತಿ ಮತ್ತು ರೇಷ್ಮೆ