Job Description: ಆಸ್ಕರ್ 2020 ಅವಾರ್ಡ್‍ಗಳನ್ನು ಸಾಧಕರಿಗೆ ನೀಡಲಾಗಿದ್ದು, ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿ ನಡೆದ ಅದ್ಧೂರಿ ಸಮಾರರಂಭದಲ್ಲಿ ಚಿತ್ರರಂಗದ ಸಾಧನೆ ಮಾಡಿದವರಿಗೆ 2020ನೇ ಸಾಲಿನ ಆಸ್ಕರ್ (92ನೇ ಸಾಲಿನ) ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಜಗತ್ತಿನ ಚಿತ್ರರಂಗದ ಅತ್ತ್ಯುನ್ನತ ಪ್ರಶಸ್ತಿ ಇದಾಗಿದ್ದು, ಇದನ್ನು ಚಿತ್ರರಂಗದ ನೊಬೆಲ್ ಪ್ರಶಸ್ತಿಯೆಂದೇ ಕರೆಯಲಾಗುತ್ತದೆ. ಆಸ್ಕರ್ 2020 ಪ್ರಶಸ್ತಿ ಪುರಸ್ಕತರ ಪಟ್ಟಿ ಈ ಕೆಳಗಿನಂತಿದೆ : * ಅತ್ಯುತ್ತಮ ಚಿತ್ರ : 'ಪ್ಯಾರಸೈಟ್' * ಅತ್ಯುತ್ತಮ ನಟ : ಜಾಕ್ವಿನ್ ಫೀನಿಕ್ಸ್ (ಚಿತ್ರ 'ಜೋಕರ್') * ಅತ್ಯುತ್ತಮ ಪೋಷಕ ನಟಿ : ಲೌರಾ ಡೆರ್ನ್ (ಚಿತ್ರ - ಮ್ಯಾರೇಜ್ ಪಾರ್ಟಿ) * ಅತ್ಯುತ್ತಮ ಅನಿಮೇಷನ್ ಚಿತ್ರ : ಟಾಯ್ ಸ್ಟೋರಿ-4. * ಅತ್ಯುತ್ತಮ ಅನಿಮೇಷನ್ ಕಿರು ಚಿತ್ರ : ಹೇರ್ ಲವ್. * ಅತ್ಯುತ್ತಮ ಮೂಲ ಚಿತ್ರಕಥೆ : ಪ್ಯಾರಾಸೈಟ್. * ಅತ್ಯುತ್ತಮ ಅಳವಡಿತ ಚಿತ್ರಕಥೆ : ಜೊಜೊ ರಾಬಿಟ್ * ಅತ್ಯುತ್ತಮ ನೇರ ಕ್ರಿಯಾ ಕಿರುಚಿತ್ರ : ದಿ ನೈಬರರ್ಸ್ ವಿಂಡೋ * ಅತ್ಯುತ್ತಮ ಪ್ರೊಡಕ್ಷನ್ ಡಿಸೈನ್ : ಒನ್ಸ್ ಅಪಾನ್ ಎ ಟೈಮ್ ಇನ್ ಹಾಲಿವುಡ್. * ಅತ್ಯುತ್ತಮ ವಸ್ತ್ರ ವಿನ್ಯಾಸ : ಲಿಟ್ಲ್ ವುಮೆನ್. * ಅತ್ಯುತ್ತಮ ಸಾಕ್ಷ್ಯ ಚಿತ್ರ : ಅಮೆರಿಕನ್ ಫ್ಯಾಕ್ಟರಿ. * ಅತ್ಯುತ್ತಮ ಕಿರು ಸಾಕ್ಷ್ಯ ಚಿತ್ರ : ಲರ್ನಿಂಗ್ ಟು ಸ್ಕೇಟ್ ಬೋರ್ಡ್ ಇನ್ ಎ ವಾರ್ ಝೋನ್(ಚಿತ್ರ - ಇಫ್ ಯು ಆರ್ ಎ ಗರ್ಲ್). ಅತ್ಯುತ್ತಮ ಶಬ್ಧ ಸಂಕಲನ : ಪೋರ್ಡ್ ವರ್ಸಸ್ ಫೆರಾರಿ. ಅತ್ಯುತ್ತಮ ಚಿತ್ರ ಸಂಕಲನ : ಪೋರ್ಡ್ ವರ್ಸಸ್ ಫೆರಾರಿ. ಅತ್ಯುತ್ತಮ ಮೇಕಪ್ ಮತ್ತು ಕೇಶ ವಿನ್ಯಾಸ : ಬಾಂಬ್ ಶೆಲ್. ಅತ್ಯುತ್ತಮ ಮೂಲ ಗೀತೆ : ಐ ಯಾಮ್ ಗೋನಾ ಲವ್ ಮಿ ಎಗೈನ್ (ಚಿತ್ರ - ರಾಕೆಟ್ ಮ್ಯಾನ್)