Job Description: IAS, IPS, IFOS, ಕೇಂದ್ರ ನಾಗರಿಕ ಸೇವೆ, ಸಚಿವಾಲಯದ ಸಿಬ್ಬಂದಿ ಸೇರಿದಂತೆ ವಿವಿಧ ರಾಜ್ಯದ ಆಡಳಿತ ಮತ್ತು ನಾಗರಿಕ ಸೇವಾ ಸಿಬ್ಬಂದಿಗಳು ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುವಂತೆ ಆನ್‌ಲೈನ್ ಕೋರ್ಸ್‌ನ್ನು ಕೇಂದ್ರ ಸರ್ಕಾರ ಪ್ರಾರಂಭಿಸಿದೆ. ಈ ಆನ್ಲೈನ್ ಕೋರ್ಸ್ ನಲ್ಲಿ "ಸಮಕಾಲೀನ ಜಗತ್ತಿನಲ್ಲಿ ಮಹಾತ್ಮಗಾಂಧಿಯ ಮಹತ್ವ" ಬಗ್ಗೆ ಇಲ್ಲಿ ಕಲಿಸಲಾಗುತ್ತದೆ. ಈ ಕೋರ್ಸ್ ನಲ್ಲಿ ಅಹಿಂಸಾ ಚಳವಳಿ, ಶಾಂತಿ ಚಳವಳಿ, ಮಹಿಳೆಯರ ಚಳವಳಿ, ಸ್ವರಾಜ್, ಸ್ವದೇಶಿ ಚಳುವಳಿ, ಸತ್ಯಾಗ್ರಹ, ನೀತಿ, ನೈತಿಕತೆ ಮೊದಲಾದ ವಿಷಯಗಳನ್ನೊಳಗೊಂಡ ಪಾಠಗಳನ್ನ ಈ ಆನ್ಲೈನ್ ಕೋರ್ಸ್ ಒಳಗೊಂಡಿರಲಿದೆ.