Job Description: * ಭಾರತದ 3693 ಐತಿಹಾಸಿಕ ಸ್ಮಾರಕಗಳು ಭಾರತೀಯ ಪುರಾತತ್ವ ಇಲಾಖೆಯು ಸಂರಕ್ಷಣೆಯಲ್ಲಿದ್ದರೂ ಕೂಡ 50 ಸ್ಮಾರಕಗಳು ಎಲ್ಲಿವೆ ಎಂದು ಪತ್ತೆ ಆಗಿಲ್ಲವೆಂದು ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಂಸದೀಯ ಸಮಿತಿಯು ಸಂಸತ್ತಿಗೆ ಸಲ್ಲಿಸಿರುವ ವರದಿಯಲ್ಲಿ ಹೇಳಿದೆ.* 2013 ರಲ್ಲಿ ಮಹಾಲೇಖಪಾಲರು "ಸ್ಮಾರಕಗಳು ಮತ್ತು ಪ್ರಾಚೀನ ವಸ್ತುಗಳ ಸಂರಕ್ಷಣೆಯ ಕಾರ್ಯಕ್ಷಮತೆಯ ಪರಿಶೀಲನೆ" ಎಂಬ ವರದಿಯನ್ನು ಸಿದ್ದಪಡಿಸಿದ್ದರು. ಆ ವರದಿಯಲ್ಲಿ 92 ಸ್ಮಾರಕಗಳ ಕುರುಹು ಪತ್ತೆಯಾಗುತ್ತಿಲ್ಲ ಎಂದು ಹೇಳಲಾಗಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸಿದ್ದ ಭಾರತೀಯ ಪುರಾತತ್ವ ಇಲಾಖೆಯು ಪರಿಶೀಲನೆ ಮಾಡಿತು.* ಕಂದಾಯ ನಕ್ಷೆಗಳು ಮತ್ತು ಪ್ರಕಟವಾಗಿದ್ದ ವರದಿಗಳ ಅಧ್ಯಯನ ನಡೆಸಿ 42 ಸ್ಮಾರಕಗಳ ಗುರುತು ಪತ್ತೆ ಮಾಡಿತ್ತು. ನಗರೀಕರಣದ ಅಭಿವೃದ್ಧಿಯಿಂದಾಗಿ 14 ಸ್ಮಾರಕಗಳ ಗುರುತು ನಷ್ಟವಾಗಿದೆ, 12 ಸ್ಮಾರಕಗಳು ಆಣೆಕಟ್ಟೆಯೊಳಗೆ ಮುಳುಗಿ ಹೋಗಿವೆ ಹಾಗೂ 24 ಸ್ಮಾರಕಗಳು ಎಲ್ಲಿವೆ ಎಂದು ಪತ್ತೆಯಾಗಿಲ್ಲ ಎಂದು ಹೇಳಲಾಗಿದೆ. * ಕುರುಹು ಸಿಗದೇಇರುವ ಸ್ಮಾರಕಗಳ ಸ್ಥಳಗಳು - ಅಸ್ಸಾಂ - ಅರುಣಾಚಲಪ್ರದೇಶ - ಹರಿಯಾಣ - ಉತ್ತರಾಖಂಡ - ದೆಹಲಿ - ಮಧ್ಯಪ್ರದೇಶ - ಮಹಾರಾಷ್ಟ್ರ - ರಾಜಸ್ಥಾನ - ಉತ್ತರ ಪ್ರದೇಶ - ಪಶ್ಚಿಮ ಬಂಗಾಳ