Job Description: ➤ ದೇಶದ ರಕ್ಷಣಾ ವಲಯದಲ್ಲಿ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸ್ಥಾಪನೆಯಾಗಲು ದಿನಗಣನೆ ಆರಂಭವಾಗಿದೆ. ಸಂಪೂರ್ಣ ದೇಶೀಯ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ಸಬ್‌ಮರಿನ್ ನಿರೋಧಕ (ಲಾಂತರ್ಗಾಮಿ ನಿರೋಧಕ) ಯುದ್ಧನೌಕೆ ‘ಮಾಲ್ವನ್’ (INS Malvan) ಜುಲೈ 22 ರಂದು ಅಧಿಕೃತವಾಗಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳ್ಳಲಿದೆ ಎಂದು ರಕ್ಷಣಾ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.➤ ಮಾಲ್ವನ್' ಯುದ್ಧನೌಕೆಯ ಪ್ರಮುಖ ವೈಶಿಷ್ಟ್ಯಗಳು 'ಮಾಹೆ' ಕ್ಲಾಸ್‌ನ ಎರಡನೇ ನೌಕೆ: ಇದು ಭಾರತೀಯ ನೌಕಾಪಡೆಗಾಗಿ ಸಿದ್ಧಗೊಳ್ಳುತ್ತಿರುವ ಒಟ್ಟು ಎಂಟು 'ಮಾಹೆ' ಸರಣಿಯ (Mahe-class) ಆಂಟಿ-ಸಬ್‌ಮರಿನ್ ವಾರ್‌ಫೇರ್ ಶಾಲೋ ವಾಟರ್ ಕ್ರಾಫ್ಟ್ (ASW-SWC) ಯುದ್ಧನೌಕೆಗಳಲ್ಲಿ ಎರಡನೆಯದಾಗಿದೆ. ಸಂಪೂರ್ಣ ದೇಶಿ ತಂತ್ರಜ್ಞಾನ (Aatmanirbhar Bharat): ಈ ನೌಕೆಯನ್ನು ಕೊಚ್ಚಿಯ 'ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್' (CSL) ನಲ್ಲಿ ನಿರ್ಮಿಸಲಾಗಿದೆ. ಇದರ ವಿಶೇಷತೆಯೆಂದರೆ, ಈ ಯುದ್ಧನೌಕೆಯ ಶೇಕಡಾ 80 ಕ್ಕೂ ಹೆಚ್ಚು ಭಾಗವನ್ನು ಭಾರತದ ಸ್ವದೇಶಿ ತಂತ್ರಜ್ಞಾನ ಮತ್ತು ಬಿಡಿಭಾಗಗಳನ್ನು ಬಳಸಿ ಅಭಿವೃದ್ಧಿಪಡಿಸಲಾಗಿದೆ. ಇದು ರಕ್ಷಣಾ ವಲಯದಲ್ಲಿ ಭಾರತ ಸಾಧಿಸುತ್ತಿರುವ ಸ್ವಾವಲಂಬನೆಗೆ ಹಿಡಿದ ಕೈಗನ್ನಡಿಯಾಗಿದೆ. ಹೆಸರಿನ ಹಿನ್ನೆಲೆ: ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣವಾದ 'ಮಾಲ್ವನ್' ಹೆಸರನ್ನು ಇದಕ್ಕೆ ಇಡಲಾಗಿದೆ. ಇದು ಛತ್ರಪತಿ ಶಿವಾಜಿ ಮಹಾರಾಜರ ನೌಕಾಪಡೆಯ ಭವ್ಯ ಪರಂಪರೆಯನ್ನು ನೆನಪಿಸುತ್ತದೆ. ಈ ಹಿಂದೆ 2003 ರವರೆಗೆ ಸೇವೆಯಲ್ಲಿದ್ದ 'ಐಎನ್‌ಎಸ್ ಮಾಲ್ವನ್' ಮೈನ್‌ಸ್ವೀಪರ್ ನೌಕೆಯ ಸವಿನೆನಪಿಗಾಗಿ ಈ ಹೆಸರನ್ನು ಮರುನಾಮಕರಣ ಮಾಡಲಾಗಿದೆ. ಪ್ರಮುಖ ಜವಾಬ್ದಾರಿಗಳು: ಆಳವಿಲ್ಲದ ಸಮುದ್ರದ ನೀರು (Shallow Waters) ಹಾಗೂ ಕರಾವಳಿ ಪ್ರದೇಶದಲ್ಲಿ ಶತ್ರುಗಳ ಜಲಾವೃತ ನೌಕೆಗಳು ಮತ್ತು ಸಬ್‌ಮರಿನ್‌ಗಳ (ಜಲಾಂತರ್ಗಾಮಿ) ಮೇಲೆ ಹದ್ದಿನ ಕಣ್ಣಿಡುವುದು ಹಾಗೂ ಅತ್ಯಂತ ವೇಗವಾಗಿ ಕಾರ್ಯಾಚರಣೆ ನಡೆಸಿ ಶತ್ರುಗಳ ಹಡಗುಗಳನ್ನು ಧ್ವಂಸ ಮಾಡುವುದು ಇದರ ಪ್ರಮುಖ ಕರ್ತವ್ಯವಾಗಿದೆ.