Job Description: * ಕರ್ನಾಟಕದ ರಾಜ್ಯಪಾಲ ಥಾವರಚಂದ್ ಗೆಹಲೋತ್ ಹಾಗೂ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶಿಯರಿ ಅವರ ನೇತೃತ್ವದಲ್ಲಿ ನವೆಂಬರ್ 4 ರಂದು ನಡೆದ "ಸಮನ್ವಯ" ದ ಸಭೆ ನಡೆಸಲಾಯಿತು.* ಗಡಿ ವಿಭಾಗದ ಪ್ರಮುಖ ಧಾರ್ಮಿಕ ಕೇಂದ್ರಗಳು, ಪ್ರವಾಸಿ ತಾಣಗಳಲ್ಲಿ ಕನ್ನಡ ಹಾಗೂ ಮರಾಠಿ ಎರಡರಲ್ಲೂ ಫಲಕ ಹಾಕಬೇಕು ಎಂಬುದನ್ನು ಸೇರಿದಂತೆ ಹಲವಾರು ವಿಷಯ ಸೇರಿದಂತೆ ಚರ್ಚೆ ಮಾಡಲಾಯಿತು.* ಬಹುನಿರೀಕ್ಷಿತ ಗಡಿ ವಿಷಯ ಹೊರತುಪಡಿಸಿ, ನೀರಾವರಿ, ಭದ್ರತೆ, ಅಕ್ರಮ ಚಟುವಟಿಕೆ ನಿಯಂತ್ರಣ ಸೇರಿದಂತೆ ಎರಡೂ ರಾಜ್ಯಗಳ ಸೌಹಾರ್ದತೆಗೆ ಅಗತ್ಯವಿರುವ ಇನ್ನಿತರ ವಿಷಯಗಳ ಕುರಿತು ಚರ್ಚೆ ನಡೆಸಲಾಯಿತು.* ಎರಡೂ ರಾಜ್ಯಗಳ ಗಡಿ ಭಾಗಗಳಲ್ಲಿ ಎರಡೂ ಭಾಷೆಗಳಲ್ಲಿ (ಮರಾಠಿ ಮತ್ತು ಕನ್ನಡ) ನಿರ್ದೇಶನ ಫಲಕಗಳನ್ನು ಅಳವಡಿಸುವ ಕುರಿತು ಸಮನ್ವಯ ಸಭೆಯಲ್ಲಿ ಒಮ್ಮತಕ್ಕೆ ಬರಲಾಯಿತು.* ಅತಿವೃಷ್ಟಿ ವೇಳೆ ಕೊಯ್ನಾ ಸೇರಿದಂತೆ ಮಹಾರಾಷ್ಟ್ರದಿಂದ ಕೃಷ್ಣಾ ನದಿ ಪಾತ್ರಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಬಿಡುವುದರಿಂದ ಆಲಮಟ್ಟಿ ಜಲಾಶಯದ ಮೇಲೆ ನೀರಿನ ಒತ್ತಡ ಹೆಚ್ಚಲಿದೆ.* ಪ್ರವಾಹದಿಂದ ಜೀವ ಹಾನಿ, ಆಸ್ತಿಪಾಸ್ತಿ ಹಾನಿಯಾಗಲಿದೆ. ಹೀಗಾಗಿ, ಎರಡೂ ರಾಜ್ಯಗಳ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಅನಾಹುತ, ನಷ್ಟಗಳನ್ನು ತಪ್ಪಿಸಲು ಕ್ರಮ ಕೈಗೊಳ್ಳುವ ಬಗ್ಗೆ, ಜೊತೆಗೆ, ಗಡಿಭಾಗದಲ್ಲಿ ಹೆಚ್ಚುತ್ತಿರುವ ಭ್ರೂಣಲಿಂಗ ಪತ್ತೆ, ಗಾಂಜಾ ಸೇರಿದಂತೆ ಇನ್ನಿತರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ ಚರ್ಚೆ ನಡೆಯಿತು.