Job Description: * ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ - 2022 ರಲ್ಲಿ ಒಟ್ಟು 10 ಲಕ್ಷ ಕೋಟಿ ಬಂಡವಾಳ ಸೆಳೆಯುವಲ್ಲಿ ಯಶಸ್ವಿಯಾಗಿದೆ. * ಈ ಹೂಡಿಕೆಯಿಂದ ಕರ್ನಾಟಕ ರಾಜ್ಯದಲ್ಲಿ 10 ಲಕ್ಷ ಹುದ್ದೆಗಳು ಸೃಷ್ಟಿಯಾಗುವ ಸಾಧ್ಯತೆ ಇದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿಯುವರು ಮುರುಗೇಶ್ ನಿರಾಣಿ ಹೇಳಿದರು.* "ಇನ್ವೆಸ್ಟ್ ಕರ್ನಾಟಕ - ಬಿಲ್ಡ್ ಫಾರ್ ದಿ ವರ್ಲ್ಡ್" ಆಶಯದಡಿ ಮೂರೂ ದಿನಗಳ ಕಾಲ ಸಮಾವೇಶ ನಡೆಸಲಾಯಿತು.* 2022 ಒಪ್ಪಂದದಲ್ಲಿ ಅತಿ ಹೆಚ್ಚು ಒಪ್ಪಂದ ಇಂಧನ ಕ್ಷೇತ್ರದಲ್ಲಿ ಆಗಿದೆ, ಶೇಕಡಾ 70 ರಷ್ಟು ಹೂಡಿಕೆಗಳು ಬೆಂಗಳೂರು ಬಿಟ್ಟು ರಾಜ್ಯದ ಬೇರೆ ನಗರಗಳಿಂದ ಆಗಿವೆ.* 9.8 ಲಕ್ಷ ಕೋಟಿ ಹೂಡಿಕೆ ಬಂದಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು. * "ಜಲಜನಕ ಇಂಧನ ತಯಾರಿಕೆ ಕ್ಷೇತ್ರದಲ್ಲಿ ಕರ್ನಾಟಕವು ಕೊಲ್ಲಿ ರಾಷ್ಟ್ರಗಳಿಗೆ ಸ್ಪರ್ಧೆ ನೀಡಲಿದ್ದು, ಆ ರಾಷ್ಟ್ರಗಳನ್ನು ಕರ್ನಾಟಕ ಹಿಂದಿಕ್ಕುವ ವಿಶ್ವಾಸವಿದೆ". ಎಂದು ಬೊಮ್ಮಾಯಿ ಯವರು ಹೇಳಿದರು. * ಕರ್ನಾಟಕದಲ್ಲಿ ಗ್ರೀನ್ ಹೈಡ್ರೋಜನ್ ಕ್ಷೇತ್ರದಲ್ಲಿ 40 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡುವದಾಗಿ ಅವಾಡ್ ಗ್ರೂಪ್ ನ ಅಧ್ಯಕ್ಷ ವಿನೀತ್ ಮಿತ್ತಲ್ ತಿಳಿಸಿದರು. * ಜಲಜನಕ ಇಂಧನ ತಂತ್ರಜ್ಞಾನದಿಂದ ವಿಶೇಷವಾಗಿ ವಾಹನ ಕ್ಷೇತ್ರದಲ್ಲಿ ಕ್ರಾಂತಿ ಆಗಲಿದೆ, ಕರ್ನಾಟಕ ಈ ಕ್ಷೇತ್ರದ ರಾಜಧಾನಿಯಾಗಲಿದೆ. 2026 ರಲ್ಲಿ ನಮ್ಮ ಉದ್ಯಮ ಕಾರ್ಯಾರಂಭ ಮಾಡಲಿದೆ ಎಂದು ಮಿತ್ತಲ್ ರವರು ತಿಳಿಸಿದರು. * ಹಸಿರು ಇಂಧನ ಕ್ಷೇತ್ರದಲ್ಲಿ ಸುಮಾರು 2 ಲಕ್ಷ ಕೋಟಿ ಬಂಡವಾಳ ಹೂಡಿಕೆ ಒಪ್ಪಂದಗಳಾಗಿವೆ.* 2030 ರ ವೇಳೆಗೆ ದೇಶದ ಒಟ್ಟು ವಿದ್ಯುತ್ ಉತ್ಪಾದನೆಯಲ್ಲಿ ಶೇಕಡಾ 50 ರಷ್ಟು ಕರ್ನಾಟಕದಲ್ಲೇ ಉತ್ಪಾದನೆಯಾಗಲಿದೆ ಎಂದು ಇಂಧನ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.