Job Description: * ಭಾರತದ ರಾಜಧಾನಿಯಾಗಿರುವ ದೆಹಲಿಯಲ್ಲಿ ವಾತಾವರಣವು ತೀವ್ರ ಹದಗೆಟ್ಟಿರುವದರಿಂದ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಸರ್ಕಾರವು ನವೆಂಬರ್ 3 ರಂದು ಆದೇಶ ಹೊರಡಿಸಿದೆ. * ಮುಂದಿನ ಆದೇಶದ ವರೆಗೆ ಶಾಲೆ ತೆರೆಯುವಂತಿಲ್ಲ ಎಂದು ಹೇಳಲಾಗಿದೆ. * ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ ರವರು ನವೆಂಬರ್ 3 ರಂದು "ಪ್ರಾಥಮಿಕ ಶಾಲೆಗಳನ್ನು ಮುಚ್ಚಲಾಗುತ್ತದೆ. ಐದನೇ ತರಗತಿಯ ನಂತರದ ಹೊರಾಂಗಣ ತರಗತಿಗಳನ್ನು ವಜಾ ಮಾಡಲಾಗುವದು ಮತ್ತು ಹಿರಿಯ ನಾಗರಿಕರ ಹೊರಾಂಗಣ ಚಟುವಟಿಕೆಗಳಿಗೆ ನಿಯಂತ್ರಣ ಹೇರಲಾಗುವದು" ಎಂದು ಹೇಳಿದರು. * ಮಾಲಿನ್ಯ ಕೇಂದ್ರ ಮಂಡಳಿಯು ದೆಹಲಿಯಲ್ಲಿ ಪ್ರತಿ ಘನ ಮೀಟರ್ ಗೆ ಗಾಳಿಯಲ್ಲಿ 445 ಮಾಲಿನ್ಯಕಾರಕ ಕಣಗಳು ಇದ್ದು, ಮಾಲಿನ್ಯದ ಮಟ್ಟ ತೀವ್ರವಾಗಿತ್ತು ಎಂದು ಹೇಳಿಕೆ ನೀಡಿದೆ. * ಏರ್ ಪ್ಯೂರಿಫೈಯರ್ ಗೆ ಬೇಡಿಕೆ ಹೆಚ್ಚಾಗಿದೆ ಹಾಗಾಗಿ ಕಂಪನಿಗಳು ತಮ್ಮ ಉತ್ಪನ್ನವನ್ನು ಕಡಿಮೆ ಬೆಳೆಗೆ ಮಾರುತ್ತಿವೆ - 15 ಸಾವಿರದಿಂದ 20 ಸಾವಿರ ಇದ್ದ ಬೆಲೆ ಈಗ 7 ರಿಂದ 8 ಸಾವಿರವಾಗಿದೆ. - ಆನ್ ಲೈನ್ ಮೂಲಕ ಜನರು ಹೆಚ್ಚು ಖರೀದಿ ಮಾಡುತ್ತಿದ್ದಾರೆ.