Job Description: * ಇತ್ತೀಚಿಗೆ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್‌ಬಿಐ ) ರೆಪೊ ದರವನ್ನು ಶೇಕಡ 0.50 ರಷ್ಟು ಹೆಚ್ಚಿಸಿದ್ದು , ಗೃಹ , ವಾಹನ ಹಾಗೂ ಇತರ ಸಾಲಗಳ ಬಡ್ಡಿ ದರ ಇನ್ನಷ್ಟು ಜಾಸ್ತಿ ಆಗಲಿದೆ.* ಹಣದುಬ್ಬರ ಏರಿಕೆಯನ್ನು ನಿಯಂತ್ರಿಸುವ ಉದ್ದೇಶ ದಿಂದ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸುತ್ತಿರುವುದು ಐದು ವಾರಗಳ ಅವಧಿಯಲ್ಲಿ ಇದು ಎರಡನೆಯ ಬಾರಿ.* ರೆಪೊ ದರದಲ್ಲಿ ಆಗಿರುವ ಹೆಚ್ಚಳವು ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ಒಂದೇ ಬಾರಿಗೆ ಮಾಡಿರುವ ಅತಿದೊಡ್ಡ ಏರಿಕೆ, ಈಗ ರೆಪೊ ದರವು ಶೇ 4.90 ಕ್ಕೆ ತಲುಪಿದೆ. ಮೇ ತಿಂಗಳಲ್ಲಿ ಆರ್‌ಬಿಐ ರೆಪೊ ದರ ವನ್ನು ಶೇ 0.40 ರಷ್ಟು ಜಾಸ್ತಿ ಮಾಡಿತ್ತು.* ಹಣದುಬ್ಬರ ಏರಿಕೆಯಾಗಿರುವ ಸಮಯದಲ್ಲಿ ಆರ್ ಬಿಐ ರೆಪೋ ದರವನ್ನು ಹೆಚ್ಚಿಸುತ್ತದೆ, ಇದರಿಂದ ಸಹಜವಾಗಿ ಬ್ಯಾಂಕ್ಗಳ ಸಾಲದ ಮೇಲಿನ ಬಡ್ಡಿದರ ಹೆಚ್ಚಿಸುತ್ತದೆ.* ಇದರಿಂದ ಜನಸಾಮನ್ಯರಿಗೆ ತೊಂದರೆಯಾಗುತ್ತದೆ.ರೆಪೋ ದರ ಹೆಚ್ಚಳವಾದ್ರೆ ಹಣದುಬ್ಬರ ತಗ್ಗುತ್ತದೆ. ಅದೇ ರೆಪೋ ದರ ಇಳಿಕೆಯಾದ್ರೆ ಹಣದುಬ್ಬರ ಏರಿಕೆಯಾಗುತ್ತದೆ.* ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹಣಕಾಸು ನೀತಿ ಸಮಿತಿ (MPC) ಇಂದು ರೆಪೋ ದರವನ್ನು ( repo rate) 50 ಮೂಲ ಅಂಕಗಳಷ್ಟು (50 basis points) ಹೆಚ್ಚಿಸಿದೆ. ಇದರಿಂದ ರೆಪೋ ದರ ಶೇ.4.40ರಿಂದ ಶೇ.4.90ಕ್ಕೆ ಏರಿಕೆಯಾಗಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದರು. * ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಹಾಗೂ ಪೂರೈಕೆ ವ್ಯವಸ್ಥೆಯಲ್ಲಿನ ವ್ಯತ್ಯಯದ ಹಿನ್ನೆಲೆಯಲ್ಲಿ ಈ ನಿರ್ಣಯ ಕೈಗೊಂಡಿದ್ಧೇವೆ ಎಂದ ಆರ್ಬಿಐ ಗರ್ವನರ್ ಶಕ್ತಿಕಾಂತ್ ದಾಸ್ ಅವರು ತಿಳಿಸಿದ್ದಾರೆ.* * ರೆಪೋ ದರ ಎಂದರೇನು ? * ವಾಣಿಜ್ಯ ಬ್ಯಾಂಕುಗಳಿಗೆ (Commercial banks) ಹಣದ ಕೊರತೆ ಎದುರಾದಾಗ ಅವು ಆರ್ ಬಿಐಯಿಂದ ಪಡೆಯೋ ಸಾಲದ (Loan) ಮೇಲೆ ವಿಧಿಸೋ ಬಡ್ಡಿದರವೇ ರೆಪೋ ದರ.