Job Description: * ಮಿಥಾಲಿ ರಾಜ್ ಅವರು ತಮ್ಮ 19 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಭಾರತಕ್ಕಾಗಿ 12 ಟೆಸ್ಟ್, 232 OIS ಮತ್ತು 89 T20I ಗಳನ್ನು ಆಡಿದ್ದಾರೆ.* ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ಭಾವನಾತ್ಮಕ ಟಿಪ್ಪಣಿಯಲ್ಲಿ, ಮಿಥಾಲಿ ರಾಜ್ ಅವರು ಈವರೆಗೆ ಬೆಂಬಲ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದ್ದಾರೆ. ಜೀವನದ 2ನೇ ಇನ್ನಿಂಗ್ಸ್ಗೂ ಆಶೀರ್ವಾದ ಮಾಡುವಂತೆ ಕೋರಿದ್ದಾರೆ. * ಅವರು ದಕ್ಷಿಣ ಆಫ್ರಿಕಾ ವಿರುದ್ಧ ವಿಶ್ವಕಪ್‌ನಲ್ಲಿ ಭಾರತಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು* ಮಿಥಾಲಿ ರಾಜ್ ತಮ್ಮ ವೃತ್ತಿ ಜೀವನದಲ್ಲಿ 7 ODI ಶತಕಗಳು ಮತ್ತು 1 ಟೆಸ್ಟ್ ಶತಕದೊಂದಿಗೆ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನವನ್ನು ಮುಗಿಸಿದಂತಾಗಿದೆ. ಟೆಸ್ಟ್ ಪಂದ್ಯಗಳಲ್ಲಿ ಅವರು 4 ಅರ್ಧ ಶತಕಗಳನ್ನು ಗಳಿಸಿದರೆ, ಏಕದಿನ ಪಂದ್ಯಗಳಲ್ಲಿ 64 ಅರ್ಧಶತಕಗಳನ್ನು ಮತ್ತು T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 17 ಅರ್ಧಶತಕಗಳನ್ನು ಬಾರಿಸಿದ್ದಾರೆ.* "ಇಷ್ಟು ವರ್ಷಗಳ ಕಾಲ ತಂಡವನ್ನು ಮುನ್ನಡೆಸಿರುವುದು ಗೌರವವಾಗಿದೆ. ಇದು ಖಂಡಿತವಾಗಿಯೂ ನನ್ನನ್ನು ಒಬ್ಬ ವ್ಯಕ್ತಿಯಾಗಿ ರೂಪಿಸಿದೆ. ಭಾರತೀಯ ಮಹಿಳಾ ಕ್ರಿಕೆಟ್ ಅನ್ನು ರೂಪಿಸಲು ಸಹಾಯ ಮಾಡಿದೆ" ಎಂದು ಮಿಥಾಲಿ ತಮ್ಮ ಪತ್ರದಲ್ಲಿ ಬರೆದಿದ್ದಾರೆ.* ಟೆಸ್ಟ್ ಕ್ರಿಕೆಟ್ ನಲ್ಲಿ ದ್ವಿಶತಕ (214) ಗಳಿಸಿದ ಭಾರತದ ಏಕೈಕ ಆಟಗಾರ್ತಿ* ಆರು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಆಡಿದ ಸಾಧನೆ, ಏಕದಿನ ಕ್ರಿಕೆಟ್‌ನಲ್ಲಿ ಸತತ ಏಳು ಅರ್ಧಶತಕ ಗಳಿಸಿದ ವಿಶ್ವದಾಖಲೆ* ಏಕದಿನ ಪಂದ್ಯಗಳಲ್ಲಿ ( 155 ) ತಂಡವನ್ನು ಮುನ್ನಡೆಸಿದದರು, ಏಕದಿನ ಕ್ರಿಕೆಟ್‌ನಲ್ಲಿ ಶತಕ ಗಳಿಸಿದ ಅತಿಕಿರಿಯ ಆಟಗಾರ್ತಿ ( 16 ವರ್ಷ , 205 ದಿನ )* ಟೆಸ್ಟ್‌ನಲ್ಲಿ ದ್ವಿಶತಕ ಗಳಿಸಿದ ಅತಿಕಿರಿಯ ಆಟಗಾರ್ತಿ ( 19 ವರ್ಷ , 254 ದಿನ), ಏಕದಿನ ಕ್ರಿಕೆಟ್‌ನಲ್ಲಿ ಅತ್ಯಧಿಕ ಅರ್ಧಶತಕ ಭರಿಸಿದರು