Job Description: * ಯುರೋಪ್‌ನಲ್ಲಿ ಇದುವರೆಗೂ ಬ್ರಿಟನ್, ಸ್ಪೇನ್, ಪೋರ್ಚುಗಲ್, ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ನೆದರ್‌ಲ್ಯಾಂಡ್ಸ, ಇಟಲಿ ಮತ್ತು ಸ್ವೀಡನ್‌ಗಳಲ್ಲಿ ವೈರಸ್ ಖಚಿತವಾಗಿದೆ* ಮಂಕಿಪಾಕ್ಸ್ ವೈರಸ್, ಕೊರೊನಾ ವೈರಸ್‌ನಂತೆ ಗಾಳಿ ಮೂಲಕ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ. ಆದರೆ ಲೈಂಗಿಕ ಸಂಪರ್ಕದಿಂದ ಹರಡಿದ ಕೆಲವು ಪ್ರಕರಣಗಳು ವರದಿಯಾಗಿವೆ.* ವೈರಸ್ ತನ್ನ ಸ್ವರೂಪವನ್ನು ಬದಲಿಸಿಕೊಳ್ಳುವ ಸಾಧ್ಯತೆ ಇದೆ. ಹೊಸ ರೂಪಾಂತರಿ ಸೃಷ್ಟಿಯಾಗಿರುವ ಬಗ್ಗೆ ಕೊಂಚ ಸುಳಿವು ದೊರಕಿದೆ. ಹಿಂದಿಗಿಂತಲೂ ಸುಲಭವಾಗಿ ಮಂಕಿಪಾಕ್ಸ್ ಹರಡಬಹುದು.* ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ಜನರು ತಮ್ಮ ವೈದ್ಯರನ್ನು ಭೇಟಿ ಮಾಡಬೇಕು ಎಂದು ಡಾ.ಮೂರ್ತಿ ಸೂಚಿಸಿದ್ದಾರೆ.* ಬ್ರಿಟನ್‌ನಲ್ಲಿ 20 ಪ್ರಕರಣಗಳು ಖಚಿತವಾಗಿವೆ. ಸ್ಪೇನ್‌ನಲ್ಲಿ 31 ಪ್ರಕರಣಗಳು ಖಚಿತವಾಗಿದೆ. ಅವುಗಳಲ್ಲಿ 24 ಪ್ರಕರಣಗಳು ಶುಕ್ರವಾರ ಪತ್ತೆಯಾಗಿವೆ. ಪೋರ್ಚುಗಲ್‌ನಲ್ಲಿ 23 ಪ್ರಕರಣಗಳು ದೃಢಪಟ್ಟಿವೆ.* ಯುರೋಪ್‌ನ ಒಂಬತ್ತು ದೇಶಗಳಲ್ಲಿ ಮಂಕಿಪಾಕ್ಸ್ ವೈರಸ್ ಪ್ರಕರಣಗಳು ಮತ್ತಷ್ಟು ವ್ಯಾಪಿಸಿದೆ. ಅಮೆರಿಕ, ಕೆನಡಾ, ಆಸ್ಟ್ರೇಲಿಯಾಗಳಲ್ಲಿ ಕೂಡ ಪ್ರಕರಗಳು ವರದಿಯಾಗಿವೆ. ಈ ಬಗ್ಗೆ ಎಚ್ಚರಿಕೆ ವಹಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.