Job Description: * ಬ್ರೆಜಿಲ್‌ನ ಕ್ಯಾಕ್ಸೈಸ್ ದೋ ಸುಲ್‌ನಲ್ಲಿ ನಡೆಯುತ್ತಿರುವ 24 ನೇ ಡೆಫ್ಲಿಂಪಿಕ್ಸ್‌ನಲ್ಲಿ 10 ಮೀಟರ್ ಏರ್ ರೈಫಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಧನುಷ್ ಶ್ರೀಕಾಂತ್ ಅವರು ಪ್ರಿಯೆಶಾ ದೇಶಮುಖ್ ಚಿನ್ನದ ಪದಕ ಗೆದ್ದರು. * ತೆಲಂಗಾಣ ಮೂಲದ ಧನುಷ್ ಶ್ರೀಕಾಂತ್ ಅವರು ಹೈದರಾಬಾದ್‌ನಲ್ಲಿರುವ ಒಲಿಂಪಿಕ್ ಪದಕ ವಿಜೇತ ಗಂಗನ್ ನಾರಂಗ್ ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. * ಕೊನೆಯ ದಿನದ ಶೂಟಿಂಗನಲ್ಲಿ ಧನುಷ್ ಮತ್ತು ಪ್ರಿಯೆಶಾ ಜರ್ಮನಿಯ ಸೆಬಾಸ್ಟಿಯನ್ ಹೆರ್ಮನಿ ಮತ್ತು ಸಬ್ರಿನಾ ಎಕರ್ಟ್ ಅವರನ್ನು ಚಿನ್ನದ ಪದಕ ಪಂದ್ಯದಲ್ಲಿ 16-10 ರಿಂದ ಸೋಲಿಸಿದರು. * ಈ ಚಿನ್ನದ ಪದಕವು ಧನುಷ್ ಅವರು ಕ್ರೀಡಾಕೂಟದ ಎರಡನೇ ಚಿನ್ನದ ಪದಕವಾಗಿದೆ.