Job Description: * ಇಂಟೆರ್ ನೆಟ್ ಭವಿಷ್ಯಕ್ಕಾಗಿ ಘೋಷಣೆಯೊಂದನ್ನು ಹೊರಡಿಸಿರುವ ಅಮೆರಿಕ ಸರ್ಕಾರವು ಜಗತ್ತಿನ 60 ದೇಶಗಳೊಂದಿಗೆ ಸೇರಿ 2022 ಏಪ್ರಿಲ್ 8ರಂದು "ಡಿಕ್ಲರೇಷನ್ ಫಾರ್ ದಿ ಫ್ಯೂಚರ್ ಆಫ್ ದಿ ಇಂಟರ್ ನೆಟ್" ಎಂಬ ಘೋಷಣೆಯನ್ನು ಹೊರಡಿಸಿದೆ. ಇದರ ಮೂಲ ಉದ್ದೇಶಗಳು:- ಇಂಟರ್ ನೆಟ್ ಅನ್ನು ಮುಕ್ತ ಸ್ವಾತಂತ್ರ್ಯ ಹಾಗೂ ತಟಸ್ಥವಾಗಿ ಇಡುವುದು- ಹೆಚ್ಚುತ್ತಿರುವ ಡಿಜಿಟಲ್ ಸರ್ವಾಧಿಕಾರವನ್ನು ತಡೆಯುವುದು- ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವುದು- ನೆಟ್ ತಾಟಸ್ಥ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮೊಟಕು ಗೊಳಿಸದೆ ಕಾನೂನುಬಾಹಿರ ಕಂಟೆಂಟ್ ತೆಗೆದುಹಾಕುವುದು- ಇಂಟರ್ ನೆಟ್ ಮತ್ತು ಡಿಜಿಟಲ್ ತಂತ್ರಜ್ಞಾನಗಳು ಪರಿಸರದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿರುವುದನ್ನು ಖಾತರಿಪಡಿಸಿಕೊಳ್ಳುವುದು ಇದರ ಮೂಲ ಉದ್ದೇಶವಾಗಿದೆ.* ಈ ಘೋಷಣೆಗೆ ಭಾರತವನ್ನು ಬಿಟ್ಟು ಇನ್ನುಳಿದ ಹಲವಾರು ಪ್ರಮುಖ ದೇಶಗಳಾದ ಅಮೆರಿಕ, ಐರೋಪ್ಯ ಒಕ್ಕೂಟ, ಬ್ರಿಟನ್, ಕೆನಡಾ ಹಾಗೂ ಫ್ರಾನ್ಸ್ ದೇಶಗಳು ಸೇರಿದಂತೆ ಈ ಘೋಷಣೆಗೆ ಸಹಿ ಹಾಕಿವೆ * ಭಾರತಕ್ಕೆ ಮೊದಲನೆಯ ಸ್ಥಾನ: ಡಿಜಿಟಲ್ ಹಕ್ಕುಗಳನ್ನು ಪ್ರತಿಪಾದಿಸುವ 'ಅಕ್ಸೆಸ್ ನೌ' ನ ಎಂಬ ಸಂಸ್ಥೆ ಪ್ರಕಾರ 2021ರಲ್ಲಿ ಇಂಟರ್ನೆಟ್ ಮೇಲೆ ನಿಷೇಧ ಹೇರಿದ(ಶಟ್ ಡೌನ್) ದೇಶಗಳಲ್ಲಿ ಭಾರತವು ಮೊದಲ ಸ್ಥಾನದಲ್ಲಿದೆ. ಈ ಮೂಲಕ ಭಾರತ ದೇಶವು ಶಟ್ ಡೌನ್ ಮಾಡಿದ್ದು ಸತತ ನಾಲ್ಕನೇ ವರ್ಷವಾಗಿದೆ.