Job Description: * ಹಸಿರು ಜಲಜನಕ ಕುರಿತು ಭಾರತ ಮತ್ತು ಜರ್ಮನಿಯ ನೇತೃತ್ವದಲ್ಲಿ 'ಭಾರತ - ಜರ್ಮನ್ ಗ್ರೀನ್ ಹೈಡ್ರೋಜನ್ ಟಾಸ್ಕ್ ಪೋರ್ಸ್' ಅನ್ನು ಸ್ಥಾಪಿಸಲಾಗುತ್ತದೆ. * ಪರಿಸರಸ್ನೇಹಿ ಜಲಜನಕದ ಉತ್ಪಾದನೆ, ಬಳಕೆ, ಸಂಗ್ರಹಣೆ, ಮತ್ತು ವಿತರಣೆ ವಿವಿಧ ವಿಭಾಗಗಳಲ್ಲಿ ಸಹಕಾರವನ್ನು ಬಲಪಡಿಸುವುದು ಇದರ ಮೂಲ ಉದ್ದೇಶವಾಗಿದೆ.* ಗ್ರೀನ್ ಹೈಡ್ರೋಜನ್ ಎಂದರೇನು? ಸೌರಶಕ್ತಿ ಪವನ ಶಕ್ತಿಯಂತಹ ನವೀಕರಿಸಬಹುದಾದ ಇಂಧನಗಳನ್ನು ಬಳಸಿ ನೀರನ್ನು ಜಲಜನಕ ಹಾಗೂ ಆಕ್ಸಿಜನ್ ಆರ್ಟ್ ವಿಭಜಿಸಿ ಜಲಜನಕ ಉತ್ಪಾದಿಸುವುದೇ ಗ್ರೀನ್ ಹೈಡ್ರೋಜನ್ ಅಂದರೆ ಪರಿಸರ ಸ್ನೇಹಿ ಜಲಜನಕ.* ಪರಿಸರ ಸ್ನೇಹಿ ಮತ್ತು ಸುಸ್ಥಿರ ಅಭಿವೃದ್ಧಿ ಪಾಲುದಾರಿಕೆ ಯ ಜಂಟಿ ಹೇಳಿಕೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಮತ್ತು ಜರ್ಮನಿಯ ಚಾನ್ಸಲರ್ ಓಲಾಫ್ ಶೋಲ್ಜ್ ಈ ಪಾಲುದಾರಿಕೆಗೆ ಸಹಿ ಹಾಕಿದ್ದಾರೆ.* ಈ ಪಾಲುದಾರಿಕೆಯ ಉದ್ದೇಶ ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ಸಹಕಾರ ತೀವ್ರಗೊಳಿಸುವುದು, ಪರಿಸರ ರಕ್ಷಣೆ ಕುರಿತು ಕ್ರಮಗಳನ್ನು ತ್ವರಿತಗೊಳಿಸುವುದು ಈ ಪಾಲುದಾರಿಕೆಯ ಮೂಲ ಉದ್ದೇಶ. * 2030ರವರೆಗೆ ಹವಾಮಾನ ಬದಲಾವಣೆಗೆ ಸಂಬಂಧಿತ ಯೋಜನೆಗಳಲ್ಲಿ10 ಬಿಲಿಯನ್ ಪೌಂಡ್ ಹಣವನ್ನು ಭಾರತದಲ್ಲಿ ಹೂಡುವುದಾಗಿ ಜರ್ಮನಿಯು ಮುಂಚಿತವಾಗಿ ತಿಳಿಸಿದೆ.