Job Description: * ನೇಪಾಳಿ ಶರ್ಪಾ ಜನಾಂಗದ 52 ವರ್ಷದ ಕಾಮಿ ರಿಟಾ ಮತ್ತು 11 ಜನ ಶೆರ್ಪಾ ಮಾರ್ಗದರ್ಶಕರ ತಂಡದವರು ಭಾನುವಾರ ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದಾರೆ.* ಕಾಮಿ ರಿಟಾ 17 ಜನವರಿ 1970 ಸೋಲುಕುಂಬು, ನೇಪಾಳದಲ್ಲಿ ಜನಿಸಿದರು * ರಿಟಾ ಅವರು 26 ಬಾರಿ ಮೌಂಟ್ ಎವರೆಸ್ಟ್ ಏರುವ ಮೂಲಕ ಅತಿ ಹೆಚ್ಚುಬಾರಿ ಎವರೆಸ್ಟ್ ಏರಿದ ಪರ್ವತಾ ರೋಹಿ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.* ಇವರು ಮೊದಲ ಬಾರಿ 1994 ಮೇ 13 ರಂದು ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ್ದರು.* ರಿಟಾ ಅವರು 7 ಮೇ 2022 ರಂದು ಎವರೆಸ್ಟ್ ಏರುವ ಮೂಲಕ ತಮ್ಮ ಹಿಂದಿನ ದಾಖಲೆಗಳನ್ನು ತಾವೇ ಮುರಿದಿದ್ದಾರೆ ಎಂದು ಸೆವೆನ್ ಸಮ್ಮಿಟ್ ಟ್ರಕ್ಸ್ ವ್ಯವಸ್ಥಾಪಕ ದವಾ ಸೇರ್ಪ ತಿಳಿಸಿದ್ದಾರೆ.