Job Description: * ರೈಲು ಪ್ರಯಾಣಿಕರ ನೆರವಿಗಾಗಿ ಮಿಷನ್ ರೈಲ್ ಕರ್ಮಯೋಗಿ ಅಡಿಯಲ್ಲಿ 51,000 ಕ್ಕೂ ಹೆಚ್ಚು ಮುಂಚೂಣಿ ರೈಲ್ವೆ ಸಿಬ್ಬಂದಿಗೆ ಕೇಂದ್ರ ಸರ್ಕಾರವು ತರಬೇತಿ ನೀಡಿದೆ. * ಈ ಉದ್ಯೋಗಿಗಳು ಭಾರತೀಯ ರೈಲ್ವೇ ಸಚಿವಾಲಯದ ಅಡಿಯಲ್ಲಿ ಕೇಂದ್ರೀಕೃತ ತರಬೇತಿಯ ಸಂಸ್ಥೆಯಾದ "ಇಂಡಿಯನ್ ರೈಲ್ವೇಸ್ ಇನ್‌ಸ್ಟಿಟ್ಯೂಟ್ ಆಫ್ ಟ್ರಾನ್ಸ್‌ಪೋರ್ಟ್ ಮ್ಯಾನೇಜ್‌ಮೆಂಟ್‌"ನಲ್ಲಿ ತರಬೇತಿ ಪಡೆದ ಮಾಸ್ಟರ್ ಟ್ರೈನರ್‌ಗಳಿಂದ ತರಬೇತಿ ಪಡೆದಿದ್ದಾರೆ.* ಪ್ರಯಾಣದ ವೇಳೆ ಪ್ರಯಾಣಿಕರಿಗೆ ಯಾವುದೇ ಸಮಸ್ಯೆ ಅಥವಾ ಅವರ ವಿರುದ್ದ ಏನೇ ಘಟನೆಗಳು ನಡೆದಾಗ, ಈ ರೈಲ್ವೆ ಸಿಬ್ಬಂದಿಯು ನೆರವಿಗೆ ಬರಲಿದ್ದಾರೆ.* ಸಂತ್ರಸ್ತ ಪ್ರಯಾಣಿಕರನ್ನು ಕೇಂದ್ರ ಸರ್ಕಾರದ ರೈಲ್ವೆ ಪೊಲೀಸರು ಅಥವಾ ರೈಲ್ವೆ ರಕ್ಷಣಾ ಪಡೆಗಳ ಬಳಿಗೆ ಕರೆದೊಯ್ಯಲಿದ್ದಾರೆ. ಏನಿದು ಯೋಜನೆ ? * ಮಿಷನ್ ಕರ್ಮಯೋಗಿಯನ್ನು ಸರ್ಕಾರವು ಸೆಪ್ಟೆಂಬರ್, 2020 ರಲ್ಲಿ ಪ್ರಾರಂಭಿಸಿತು, ಇದು ವಿಶ್ವದ ಎಲ್ಲಿಯಾದರೂ ಅತ್ಯಂತ ಮಹತ್ವದ ಸಾಮರ್ಥ್ಯ ನಿರ್ಮಾಣ ಉಪಕ್ರಮಗಳಲ್ಲಿ ಒಂದಾಗಿದೆ.* 6 ತಿಂಗಳ ಅವಧಿಯಲ್ಲಿ ಸುಮಾರು ಒಂದು ಲಕ್ಷ ಮುಂಚೂಣಿ ರೈಲ್ವೆ ಸಿಬ್ಬಂದಿಗೆ ತರಬೇತಿ ನೀಡಲು ಯೋಜನೆಯು ಪ್ರಯತ್ನಿಸುತ್ತದೆ. * ನಾಗರಿಕ-ಕೇಂದ್ರಿತ ತರಬೇತಿಯನ್ನು ನೀಡುವ ಮೂಲಕ ಈ ಮುಂಚೂಣಿ ಸಿಬ್ಬಂದಿಗಳ ದೃಷ್ಟಿಕೋನವನ್ನು ಪರಿವರ್ತಿಸುವುದು ಈ ಮಿಷನ್‌ನ ಉದ್ದೇಶವಾಗಿದೆ.