Job Description: * ಪ್ರಸ್ತುತ ಗ್ರೀಸ್‌ನ ಹೆರಾಕ್ಲಿಯೊನ್‌ನಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಐಡಬ್ಲ್ಯುಎಫ್‌ ಚಾಂಪಿಯನ್‌ಷಿಪ್‌ನ 49 ಕೆಜಿ ವಿಭಾಗದಲ್ಲಿ ಗ್ಯಾನೇಶ್ವರಿ ಯಾದವ್‌ ಅವರು ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಹಾಗೂ ವಿ.ರಿತಿಕಾ ಅವರು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. * ಗ್ಯಾನೇಶ್ವರಿ ಒಟ್ಟು 156 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ಜಯಿಸಿಕೊಂಡಿದ್ದಾರೆ. ಹಾಗೆಯೇ 49 ಕೆಜಿ ವಿಭಾಗದಲ್ಲೇ ಸ್ಪರ್ಧಿಸಿದ್ದ ರಿತಿಕಾ ಒಟ್ಟು 150 ಕೆಜಿ ಭಾರ ಎತ್ತುವ ಮೂಲಕ ಕಂಚಿನ ಪದಕವನ್ನು ಜಯಿಸಿಕೊಂಡಿದ್ದಾರೆ. * ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ಗೆದ್ದಿರುವ ಇಂಡೊನೇಷ್ಯಾದ ವಿಂಡಿ ಕ್ಯಾಂಟಿಕಾ ಐಸಾಹ್‌ ಅವರು ಈ ಬಾರಿ ಒಟ್ಟು 185 ಕೆಜಿ ಭಾರ ಎತ್ತುವ ಮೂಲಕ ಚಿನ್ನದ ಪದಕವನ್ನು ಪಡೆದುಕೊಂಡಿದ್ದಾರೆ. * ಚೀನಾದ ಜಿಯಾಂಗ್‌ ಹುಯಿವಾ ಅವರು 49 ಕೆಜಿ ವಿಭಾಗದ 206 ಕೆಜಿ ಭಾರ ಎತ್ತಿರುವ ವಿಶ್ವದಾಖಲೆ ಇದೆ. * ಈ ಹಿಂದೆ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದ ಮೀರಾಬಾಯಿ ಚಾನು 202 ಕೆಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ. * ಇದೀಗ ಉಕ್ರೇನ್ ಮೇಲಿನ ದಾಳಿಯ ಹಿನ್ನೆಲೆಯಲ್ಲಿ ಐಡಬ್ಲ್ಯುಎಫ್‌ ಟೂರ್ನಿಗಳಲ್ಲಿ ಸ್ಪರ್ಧಿಸಲು ರಷ್ಯಾ ಹಾಗೂ ಬೆರಾರೂಸ್‌ ಅಥ್ಲೀಟ್‌ಗಳಿಗೆ ಅವಕಾಶ ಒದಗಿಸಲಾಗಿಲ್ಲ.‌ ಕಳೆದ ಆವೃತ್ತಿಯಲ್ಲಿ ರಷ್ಯಾ ದೇಶವು 9 ಪದಕ ಅಂದರೆ ಅತೀ ಹೆಚ್ಚು ಪದಕಗಳನ್ನು ಗೆದ್ದಿರುವ ದೇಶವಾಗಿತ್ತು.