Job Description: * ಜಗತ್ತಿನಲ್ಲಿ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2 ನೇ ಸ್ಥಾನ ಪಡೆದುಕೊಂಡಿದೆ. * ಈ ವಿಮಾನ ನಿಲ್ದಾಣದ ಮೂಲಕ ಈ ಮಾರ್ಚ್ ತಿಂಗಳಿನಲ್ಲಿ ಸುಮಾರು 36.10 ಲಕ್ಷ ಪ್ರಯಾಣಿಕರು ವಿಮಾನ ಸೇವೆಗಳನ್ನು ಪಡೆದುಕೊಂಡಿದ್ದಾರೆ, ಈ ಹಿನ್ನಲೆಯಿಂದಾಗಿ ಈ ವಿಮಾನ ನಿಲ್ದಾಣಕ್ಕೆ 2 ನೇ ಸ್ಥಾನ ಲಭಿಸಿದೆ. * ಇದರಂತೆಯೇ ಕಳೆದ ಮಾರ್ಚ್‌ನಲ್ಲಿ ಅಮೆರಿಕದ ಅಟ್ಲಾಂಟಾ ವಿಮಾನ ನಿಲ್ದಾಣವು ಸುಮಾರು 44.20 ಲಕ್ಷ ಜನರಿಗೆ ವೈಮಾನಿಕ ಸೇವೆಗಳನ್ನು ಕಲ್ಪಿಸಿದೆ, ಈ ಹಿನ್ನಲೆಯಿಂದಾಗಿ ಈ ವಿಮಾನ ನಿಲ್ದಾಣವು ಮೊದಲ ಸ್ಥಾನದಲ್ಲಿದ್ದೆ. * ಹಾಗೆಯೇ ಯುಎಇ(UAE) ವಿಮಾನ ನಿಲ್ದಾಣವು ಸರಿ ಸುಮಾರು 35.50 ಲಕ್ಷ ಪ್ರಯಾಣಿಕರಿಗೆ ವೈಮಾನಿಕ ಸೇವೆಗಳನ್ನು ನೀಡಿರುವ ಹಿನ್ನಲೆಯಿಂದಾಗಿ 3 ನೇ ಸ್ಥಾನ ಪಡೆದುಕೊಂಡಿದೆ. * ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಭಾರತದ ದೆಹಲಿಗೆ ಸೇವೆ ಸಲ್ಲಿಸುವ ಪ್ರಾಥಮಿಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣವಾಗಿದೆ. ಈ ವಿಮಾನ ನಿಲ್ದಾಣವು 5,106 ಎಕರೆ ಪ್ರದೇಶದಲ್ಲಿ ಹರಡಿದೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹೆಸರನ್ನು ಈ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ, ಈ ವಿಮಾನ ನಿಲ್ದಾಣವು 2009 ರಿಂದ ಪ್ರಯಾಣಿಕರ ದಟ್ಟಣೆಯ ದೃಷ್ಟಿಯಿಂದ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. ಇದೀಗ ಆಸನ ಸಾಮರ್ಥ್ಯದ ಮೂಲಕ ವಿಶ್ವದ 2 ನೇ ಜನನಿಬಿಡ ವಿಮಾನ ನಿಲ್ದಾಣವಾಗಿದೆ, ಹಾಗೂ ಏಷ್ಯಾದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿದೆ. * ಈ ನಿಲ್ದಾಣದ ನಿರ್ವಹಣೆಯನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ ವರ್ಗಾಯಿಸುವ ಮೊದಲು ಭಾರತೀಯ ವಾಯುಪಡೆ ನಿರ್ವಹಿಸುತ್ತಿತ್ತು. 2006 ರ ಮೇ ನಲ್ಲಿ ಈ ವಿಮಾನ ನಿಲ್ದಾಣದ ನಿರ್ವಹಣೆಯನ್ನು ದೆಹಲಿ ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಗೆ ವರ್ಗಾಯಿಸಲಾಗಿದೆ. ಈ ನಿಲ್ದಾಣ ಪೂರ್ಣಗೊಂಡ ನಂತರ ವಿಶ್ವದ 8 ನೇ ಅತಿದೊಡ್ಡ ಪ್ರಯಾಣಿಕರ ಟರ್ಮಿನಲ್ ಆಗಿದೆ.