Job Description: * ಕೀರನ್ ಪೊಲಾರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ನೀಡಿರುವ ಹಿನ್ನಲೆಯಿಂದಾಗಿ ಇದೀಗ ವೆಸ್ಟ್ ಇಂಡೀಸ್ ಪುರುಷರ ಏಕದಿನ ಅಂತಾರಾಷ್ಟ್ರೀಯ ಹಾಗೂ ಟಿ20 ಅಂತರರಾಷ್ಟ್ರೀಯ (T20I) ನಾಯಕರಾಗಿ 'ನಿಕೋಲಸ್ ಪೂರನ್' ಅವರನ್ನು ತಂಡದ ನಾಯಕನಾಗಿ ನೇಮಕ ಮಾಡಲಾಗಿದೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ವರದಿ ಮಾಡಿದೆ. * 2022 ರಲ್ಲಿ ICC ಪುರುಷರ ಟಿ20 ವಿಶ್ವಕಪ್ ಹಾಗೂ ಅಕ್ಟೋಬರ್ 2023 ರಲ್ಲಿ ICC ಪುರುಷರ ಕ್ರಿಕೆಟ್ ವಿಶ್ವಕಪ್'ನಲ್ಲಿ 'ನಿಕೋಲಸ್ ಪೂರನ್' ತಂಡವನ್ನು ಮುನ್ನಡೆಸಲಿದ್ದಾರೆ. * ನಿಕೋಲಸ್ ಪೂರನ್ ಅವರು ಟ್ರಿನಿಡಾಡಿಯನ್ ಕ್ರಿಕೆಟಿರಾಗಿದ್ದಾರೆ, ಇವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡಕ್ಕಾಗಿ ಹಾಗೂ ವೆಸ್ಟ್ ಇಂಡಿಯನ್ ದೇಶೀಯ ಪಂದ್ಯಗಳಲ್ಲಿ ಟ್ರಿನಿಡಾಡ್ ಹಾಗೂ ಟೊಬಾಗೋಗಾಗಿ ಆಡುತ್ತಾರೆ. ಇವರು ಈ ಹಿಂದೆ 2016 ರಲ್ಲಿ ವೆಸ್ಟ್ ಇಂಡೀಸ್‌ಗಾಗಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದಾರೆ. 2022 ರ ಮೇ ನಲ್ಲಿ ಸೀಮಿತ ಓವರ್‌ಗಳ ಕ್ರಿಕೆಟ್‌ಗಾಗಿ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿ ಪೂರನ್ ಅವರನ್ನು ನೇಮಿಸಲಾಗಿದೆ.