Job Description: * ಇತ್ತೀಚಿಗೆ ಪೆಟ್ರೋಲಿಯಂ ಮಾಜಿ ಕಾರ್ಯದರ್ಶಿ ತರುಣ್ ಕಪೂರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ ಎಂದು ಸಿಬ್ಬಂದಿ ಸಚಿವಾಲಯ ಆದೇಶ ಹೊರಡಿಸಿದೆ. * ತರುಣ್ ಕಪೂರ್ ಅವರು ಹಿಮಾಚಲ ಪ್ರದೇಶ ಕೇಡರ್‌ನ 1987-ಬ್ಯಾಚ್‌ನ IAS ಅಧಿಕಾರಿಯಾಗಿದ್ದಾರೆ. ಇವರು ಈ ಹಿಂದೆ 2021 ರ ನವೆಂಬರ್. 30 ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದರು. * ಇದೀಗ ಸಿಬ್ಬಂದಿ ಸಚಿವಾಲಯದ ಸಂಪುಟ ನೇಮಕಾತಿ ಸಮಿತಿಯು ತರುಣ್ ಕಪೂರ್ ಅವರನ್ನು ಪ್ರಧಾನ ಮಂತ್ರಿ ಕಚೇರಿಯಲ್ಲಿ(PMO) ಪ್ರಧಾನ ಮಂತ್ರಿಗಳ ಸಲಹೆಗಾರರಾಗಿ ಭಾರತ ಸರ್ಕಾರದ ಕಾರ್ಯದರ್ಶಿಯ ಶ್ರೇಣಿಯಲ್ಲಿ '02' ವರ್ಷಗಳ ಅವಧಿಗೆ ನೇಮಕ ಮಾಡಲು ಅನುಮೋದನೆಯನ್ನು ನೀಡಿದೆ. ಹಾಗೆಯೇ ಹಿರಿಯ ಅಧಿಕಾರಿಗಳಾಗಿರುವ ಹರಿರಂಜನ್ ರಾವ್ ಹಾಗೂ ಅತಿಶ್ ಚಂದ್ರ ಅವರನ್ನು ಪ್ರಧಾನಿ ಕಚೇರಿಯಲ್ಲಿ ಹೆಚ್ಚುವರಿ ಕಾರ್ಯದರ್ಶಿಗಳಾಗಿ ನೇಮಕ ಮಾಡಲಾಗಿದೆ. * ತರುಣ್ ಕಪೂರ್ ಅವರು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದಲ್ಲಿ ಭಾರತ ಸರ್ಕಾರದ ಕಾರ್ಯದರ್ಶಿಯಾಗಿದ್ದರು. ಇವರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ 33 ವರ್ಷಗಳ ಅನುಭವದೊಂದಿಗೆ ಭಾರತೀಯ ಆಡಳಿತ ಸೇವೆಯ ಸದಸ್ಯರಾಗಿದ್ದಾರೆ. MoPNG ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು, ಶ್ರೀ ಕಪೂರ್ ಅವರನ್ನು DDA ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇವರು ಹೊಸ ಹಾಗೂ ಸಚಿವಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ. ನವೀಕರಿಸಬಹುದಾದ ಇಂಧನ ರಾಷ್ಟ್ರೀಯ ಸೌರ ಮಿಷನ್'ನ್ನು ಸುಮಾರು '05' ವರ್ಷಗಳವರೆಗೆ ನೋಡಿಕೊಂಡಿದ್ದಾರೆ. ಅವರು ಸತ್ಲುಜ್ ಜಲ್ ವಿದ್ಯುತ್ ನಿಗಮ್ ಲಿಮಿಟೆಡ್, ಜಲವಿದ್ಯುತ್ ಕ್ಷೇತ್ರದಲ್ಲಿ CPSE ನಲ್ಲಿಯು ಕೆಲಸ ಮಾಡಿದ್ದಾರೆ.