Job Description: * ಇದೀಗ ಉತ್ತರಾಖಂಡ ಶಿಕ್ಷಣ ಮಂಡಳಿಯ ಪಠ್ಯಕ್ರಮವನ್ನು ಪರಿಷ್ಕರಿಸಲಾಗುತ್ತದೆ ಎಂದು ಆ ರಾಜ್ಯದ ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿಕೆ ನೀಡಿದ್ದಾರೆ, ಈ ಮೂಲಕ ರಾಜ್ಯ ಪಠ್ಯಕ್ರಮದಲ್ಲಿ ಹಿಂದೂ ಧರ್ಮಗ್ರಂಥಗಳನ್ನು ಸೇರಿಸಲಾಗುತ್ತದೆ ಎಂದಿದ್ದಾರೆ. * ಶಿಕ್ಷಣ ಸಚಿವ ಧನ್ ಸಿಂಗ್ ರಾವತ್ ಹೇಳಿರುವ ಪ್ರಕಾರ ಶಿಕ್ಷಣ ಮಂಡಳಿಯ ಸಾರ್ವಜನಿಕರಿಂದ ಸಲಹೆಗಳು ಹಾಗೂ ಶಿಕ್ಷಣತಜ್ಞರನ್ನು ಸಂಪರ್ಕಿಸಿದ ನಂತರ ವೇದಗಳು, ಭಗವದ್'ಗೀತೆ, ರಾಮಾಯಣ, ಇಅದರ ಜೊತೆಗೆ ಉತ್ತರಾಖಂಡ ರಾಜ್ಯದ ಇತಿಹಾಸವನ್ನು ಪಠ್ಯಕ್ರಮದಲ್ಲಿ ಸೇರಿಸಲಾಗುತ್ತದೆ ಎಂದಿದ್ದಾರೆ. ಅಷ್ಟೇ ಅಲ್ಲದೆ ಮುಂಬರುವ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನೂ ಜಾರಿಗೆ ತರಲಾಗುತ್ತದೆ ಎಂದಿದ್ದಾರೆ. * ಪ್ರಸ್ತುತ ಕೇಂದ್ರ ಸರ್ಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು 2020 ರ ಜುಲೈ ನಲ್ಲಿ ಅನುಮೋದಿಸಿದೆ ಹಾಗೂ 34 ವರ್ಷಗಳಲ್ಲಿ ಶಿಕ್ಷಣದಲ್ಲಿ ಈ ರೀತಿಯ ಮೊದಲ ಪರಿಷ್ಕರಣೆಯನ್ನು ತರಲಾಗಿದೆ ಎಂದಿದ್ದಾರೆ. * ಈ ರಾಷ್ಟ್ರೀಯ ಶಿಕ್ಷಣ ನೀತಿಯ ತಂತ್ರಜ್ಞಾನದ ಬಳಕೆ, ಸಂಸ್ಕೃತದ ಅಧ್ಯಯನ ಹಾಗೂ 5 ನೇ ತರಗತಿಯವರೆಗೆ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಗಳಲ್ಲಿ ಬೋಧನೆಯನ್ನು ಪ್ರೋತ್ಸಾಹಿಸಲಿದೆ ಎಂದು ತಿಳಿಸಿದ್ದಾರೆ.