Job Description: * ಪ್ರಧಾನಿ ನರೇಂದ್ರ ಮೋದಿಯವರು ವಿದೇಶಿ ಪ್ರವಾಸವನ್ನು ಕೈಗೊಂಡಿದ್ದಾರೆ, ಈ ಪ್ರವಾಸದ ಮೂಲಕ ಮೂರು ದಿನಗಳ ಕಾಲ ಜರ್ಮನಿ, ಡೆನ್ಮಾರ್ಕ್ ಹಾಗೂ ಫ್ರಾನ್ಸ್‌ ದೇಶಗಳಿಗೆ ಭೇಟಿ ನೀಡಲಿದ್ದಾರೆ. ಈ ದೇಶಗಳ ನಾಯಕರ ಭೇಟಿ ಸಮಯದಲ್ಲಿ ಮೋದಿ 25 ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಧಾನಿ ಕಚೇರಿಯು ಈ ಬಗ್ಗೆ ವರದಿ ಮಾಡಿದೆ. * ಪ್ರಧಾನಿ ಮೋದಿಯವರು '07' ದೇಶಗಳ '08' ವಿಶ್ವ ನಾಯಕರ ಜೊತೆಗೆ ದ್ವಿಪಕ್ಷಿಯ ಹಾಗೂ ಬಹುಪಕ್ಷೀಯ ಸಭೆಗಳನ್ನು ಕೈಗೊಳ್ಳಲಿದ್ದಾರೆ. ಹಾಗೂ 50 ಜಾಗತಿಕ ವ್ಯಾಪಾರಸ್ಥರ ಜೊತೆಗೆ ಸಂವಾದವನ್ನು ನಡೆಸಲಿದ್ದಾರೆ, ನಂತರದಲ್ಲಿ ಭಾರತೀಯ ಸಮುದಾಯದ ಅನೇಕ ಸದಸ್ಯರ ಜೊತೆಗೆ ಚರ್ಚಿಸಲಿದ್ದಾರೆ. * ಪ್ರಧಾನಿ ಮೋದಿ ಅವರು ಈಗಾಗಲೇ ಜರ್ಮನಿಯ ಬರ್ಲಿನ್ ತಲುಪಿದ್ದಾರೆ, ಹಾಗೂ ಅಲ್ಲಿನ ಅಧ್ಯಕ್ಷರ ಜೊತೆಗೆ ದ್ವಿಪಕ್ಷೀಯ ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ನಂತರದಲ್ಲಿ ಜರ್ಮನಿಯ ಚಾನ್ಸಲರ್‌ ಓಲಾಫ್‌ ಸ್ಕೋಲ್ ಅವರೊಂದಿಗೆ 6 ನೇ ಭಾರತ-ಜರ್ಮನಿ ಅಂತರ್‌ ಸರ್ಕಾರಿ ಸಮಾಲೋಚನೆಯಲ್ಲಿ ಅಧ್ಯಕ್ಷತೆ ಭಾಗಿಯಾಗಿದ್ದರು. * ಈ ಹಿಂದೆ 2021 ರಲ್ಲಿ ಭಾರತ ಹಾಗೂ ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 70 ವರ್ಷಗಳ ಸ್ಮರಣಾರ್ಥವಾಗಿ 2000 ರಿಂದ ಕಾರ್ಯತಂತ್ರದ ಪಾಲುದಾರ ದೇಶವಾಗಿದೆ. * ಪ್ರಧಾನಿ ಮೋದಿ ಡೆನ್ಮಾರ್ಕ್‌ಗೆ ಪ್ರಯಾಣ ಬೆಳೆಸಿ, ಡೆನ್ಮಾರ್ಕ್‌ನ ಪ್ರಧಾನ ಮಂತ್ರಿ ಮೆಟ್ಟೆ ಫ್ರೆಡೆರಿಕ್ಸೆನ್‌ ಅವರ ಜೊತೆಗೆ 2 ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ಸಂಧರ್ಭದಲ್ಲಿ ಉಭಯ ದೇಶದ ನಾಯಕರು ದ್ವಿಪಕ್ಷೀಯ ಅಂಶಗಳ ಬಗ್ಗೆ ಚರ್ಚಿಸಲಿದ್ದಾರೆ. ಹಾಗೂ ಭಾರತ-ಡೆನ್ಮಾರ್ಕ್ ವ್ಯಾಪಾರ ವೇದಿಕೆಯಲ್ಲಿ ಭಾಗಿಯಾಗಲಿದ್ದಾರೆ. * ನಂತರದಲ್ಲಿ 2 ನೇ ಭಾರತ ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿ ಮೋದಿ ನಾರ್ಡಿಕ್ ನಾಯಕರ ಜೊತೆಗೆ ಮಾತುಕತೆಯನ್ನು ನಡೆಸಲಿದ್ದಾರೆ. * ಪ್ರಧಾನಿ ಮೋದಿಯವರು ಐಸ್‌ಲ್ಯಾಂಡ್ ಪ್ರಧಾನಿ ಕ್ಯಾಟ್ರಿನ್ ಜಾಕೋಬ್ಸ್‌ಡಾಟ್ಟಿರ್, ನಾರ್ವೆಯ ಪ್ರಧಾನಿ ಜೊನಾಸ್‌ ಗಹರ್ ಸ್ಟೋರ್, ಸ್ಪೀಡನ್‌ನ ಪ್ರಧಾನಿ ಮ್ಯಾಗ್ಡಲೀನಾ ಅಂಡರ್ಸನ್‌ ಮತ್ತು ಫಿನ್‌ಲ್ಯಾಡ್‌ನ ಪ್ರಧಾನಿ ಸನ್ನಾಮರಿನ್‌ ಜೊತೆಗೆ ಚರ್ಚಿಸಲಿದ್ದಾರೆ. ಈ ಚರ್ಚೆಯಲ್ಲಿ ಆರ್ಥಿಕಯ ಬೆಳವಣಿಗೆ, ಹವಮಾನ ಬದಲಾವಣೆ, ತಂತ್ರಜ್ಞಾನ, ಇಂಧನ, ಜಾಗತಿಕ ಭದ್ರತೆ ಬಗ್ಗೆ ಮಾತುಕತೆಯನ್ನು ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿಯು ಮಾಹಿತಿ ನೀಡಿದೆ.