Job Description: * ಪ್ರಸ್ತುತ ರಷ್ಯಾ ಹಾಗೂ ಉಕ್ರೇನ್ ನಡುವಿನ ಸಮರ ಮುಂದುವರೆಯುತ್ತಿದೆ. ಇದರ ನಡುವೆ ರಷ್ಯಾ ದೇಶವು ಸರ್ಮತ್ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೆ ನೀಡಿದ್ದಾರೆ. ಈ ಕ್ಷಿಪಣಿಯ ಪರಮಾಣು ಅಸ್ತ್ರವನ್ನು ಹೊತ್ತೊಯ್ಯುವ ಸಾಮರ್ಥ್ಯವನ್ನು ಹೊಂದಿದೆ ಎಂದಿದ್ದಾರೆ. * ಈ ಸರ್ಮತ್ ಖಂಡಾಂತರ ಕ್ಷಿಪಣಿಯ ರಷ್ಯಾದ ಮುಂದಿನ ಪೀಳಿಗೆಯ ಕ್ಷಿಪಣಿಗಳಲ್ಲಿ ಒಂದಾಗಿದೆ. ಅಧ್ಯಕ್ಷ ಪುಟಿನ್ ಅವರು ಈ ಕ್ಷಿಪಣಿಗೆ 'ಅಜೇಯ' ಎಂದು ಹೆಸರಿಸಿದ್ದಾರೆ. ಇದು ಕಿನ್ಜಾಲ್ ಹಾಗೂ ಅವಂಗಾರ್ಡ್ ಹೈಪರ್ಸಾನಿಕ್ ಕ್ಷಿಪಣಿಗಳನ್ನು ಒಳಗೊಂಡಿದೆ. * ಫೆಬ್ರವರಿ 24 ರಿಂದ ರಷ್ಯಾದ ಪಡೆಗಳು ಉಕ್ರೇನ್‌ನಲ್ಲಿ ವಿಶೇಷ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಿವೆ. ಈ ಯುದ್ಧದಲ್ಲಿ ಮೊದಲ ಬಾರಿಗೆ ಕಿಂಜಾಲ್ ನ್ನು ಬಳಕೆ ಮಾಡಿರುವದಾಗಿ ರಷ್ಯಾ ಹೇಳಿಕೆ ನೀಡಿದೆ. ಇದೀಗ ರಷ್ಯಾ ದೇಶಕ್ಕೆ ಬೆದರಿಕೆ ಹಾಕಲು ಪ್ರಯತ್ನಿಸುವವರನ್ನು ಎರಡು ಬಾರಿ ಯೋಚಿಸುವಂತೆ ಈ ಕ್ಷಿಪಣಿ ಮಾಡಿದೆ ಎಂದು ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ. * ಈ ಪರೀಕ್ಷೆಯನ್ನು ಉತ್ತರ ರಷ್ಯಾದ ಪ್ಲೆಸೆಟ್ಸ್ಕ್ ಕಾಸ್ಮೋಡ್ರೋಮ್‌ನಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಪ್ರಸ್ತುತ ವಿಶ್ವದ ಗುರಿಗಳ ವಿನಾಶದ ದೀರ್ಘ ವ್ಯಾಪ್ತಿಯೊಂದಿಗೆ ಸರ್ಮತ್ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯಾಗಿದೆ, ಈ ಕ್ಷಿಪಣಿಯು ರಷ್ಯಾ ದೇಶದ ಕಾರ್ಯತಂತ್ರದ ಪರಮಾಣು ಪಡೆಗಳ ಯುದ್ಧ ಶಕ್ತಿಯನ್ನು ಗಮನಾರ್ಹವಾಗಿ ಹೆಚ್ಚಿಸಲಿದೆ. * ಈ ಸರ್ಮತ್ ಸೂಪರ್‌ಹೆವಿ ಖಂಡಾಂತರ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಆರಂಭಿಕ ಬೂಸ್ಟ್ ಹಂತದ ಜೊತೆಗೆ ಕ್ಷಿಪಣಿ-ವಿರೋಧಿ ರಕ್ಷಣಾ ವ್ಯವಸ್ಥೆಗಳಿಂದ ತಪ್ಪಿಸಿಕೊಳ್ಳಲು ವಿನ್ಯಾಸಗೊಳಿಸಿ ಅಭಿವೃದ್ಧಿ ಪಡಿಸಲಾಗಿದೆ. ಇದು 200 ಟನ್‌ಗಳಿಗಿಂತ ಅಧಿಕ ತೂಕ ಹಾಗೂ ಬಹು ಸಿಡಿತಲೆಗಳನ್ನು ಸಾಗಿಸಲು ಸರ್ಮತ್ ಕ್ಷಿಪಣಿಯು ಸಮರ್ಥವಾಗಿದೆ ಎಂದಿದ್ದಾರೆ.