Job Description: * ಸ್ಥಿರ ದೂರವಾಣಿ ಸೇವೆ ಪೂರೈಕೆಯಲ್ಲಿ ಭಾರ್ತಿ ಏರ್ಟೆಲ್ ಸಂಸ್ಥೆಯನ್ನು ಹಿಂದಿಕ್ಕಿ ರಿಲಯನ್ಸ್ ಜಿಯೋ ದೇಶದಲ್ಲೇ ನಂ.02 ಸ್ಥಾನವನ್ನು ಪಡೆದುಕೊಂಡಿದೆ. * ಇದೀಗ ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು 'ಟ್ರಾಯ್' ಮಾಹಿತಿ ನೀಡಿದೆ, 'ಟೆಲಿಕಾಂ ಆಪರೇಟರ್ ರಿಲಯನ್ಸ್ ಜಿಯೋ ಸ್ಥಿರ ಲೈನ್ ಸೇವಾ ಪೂರೈಕೆಯಲ್ಲಿ ಏರ್ ಟೆಲ್ನ್ನು ಹಿಂದಿಕ್ಕಿದೆ. * 2022 ಫೆಬ್ರವರಿರಲ್ಲಿ ರಿಲಯನ್ಸ್ ಜಿಯೋ ದೇಶದ 2 ನೇ ಅತಿದೊಡ್ಡ ಸ್ಥಿರ-ಲೈನ್ ಸೇವಾ ಪೂರೈಕೆದಾರನಾಗಿದೆ. * ಪ್ರಸ್ತುತ ರಿಲಯನ್ಸ್ ಜಿಯೋ ವೈರ್‌ಲೈನ್ ಚಂದಾದಾರರ ಸಂಖ್ಯೆ 58.85 ಲಕ್ಷದಷ್ಟಿದೆ, ಏರ್‌ಟೆಲ್ ಫೆಬ್ರವರಿಯಲ್ಲಿ 57.66 ಲಕ್ಷಕ್ಕೂ ಅಧಿಕ ಗ್ರಾಹಕರನ್ನು ಹೊಂದಿತ್ತು. ಹಾಗೆಯೇ ರಿಲಯನ್ಸ್ ಜಿಯೋಗೆ ಫೆಬ್ರವರಿಯಲ್ಲಿ 2.44 ಲಕ್ಷ ಗ್ರಾಹಕರನ್ನು ಹೊಂದಿತ್ತು. ಇದೀಗ ಜಿಯೋನ ವೈರ್‌ಲೈನ್ ಟೆಲಿಫೋನ್ ಬೆಳವಣಿಗೆಗೆ ಕಾರಣವಾಗಿದೆ. ಏರ್‌ಟೆಲ್ 91,243 ಹೊಸ ಬಳಕೆದಾರರನ್ನು ಸೇರಿಸಿಕೊಂಡು 3 ನೇ ಸ್ಥಾನದಲ್ಲಿದೆ. * ಸರ್ಕಾರಿ ಸ್ವಾಮ್ಯದ BSNL ಈ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದೆ, ಇದೀಗ BSNL 75.76 ಲಕ್ಷ ವೈರ್‌ಲೈನ್ ಗ್ರಾಹಕರನ್ನು ಹೊಂದಿದೆ. ಸರ್ಕಾರಿ ಸ್ವಾಮ್ಯದ BSNL ಹಾಗೂ MTNL, ಜೊತೆಯಾಗಿ ಈ ವಿಭಾಗದಲ್ಲಿ ಶೇ. 49.5 ಪಾಲನ್ನು ಹೊಂದಿದೆ.