Job Description: * ಆಯಿಲ್ ಇಂಡಿಯಾ ಲಿಮಿಟೆಡ್ ಅಸ್ಸಾಂ ರಾಜ್ಯದ ಜೋರ್ಹತ್‌ನಲ್ಲಿ ಭಾರತದ ಮೊದಲ ವಾಣಿಜ್ಯ ದರ್ಜೆಯ ಹಸಿರು ಹೈಡ್ರೋಜನ್ ಉತ್ಪಾದನಾ ಘಟಕವನ್ನು ಆರಂಭಿಸಿದೆ. * ಹೈಡ್ರೋಜನ್ ಉತ್ಪಾದಿಸಲು, ಈ ಸ್ಥಾವರವು ಆಯಿಲ್ ಇಂಡಿಯಾದ 500kw ಸೋಲಾರ್ ಪ್ಲಾಂಟ್ ಪಂಪ್ ಸ್ಟೇಷನ್‌ನಿಂದ ನವೀಕರಿಸಬಹುದಾದ ಶಕ್ತಿಯನ್ನು ಬಳಕೆ ಮಾಡಲಿದೆ. * ಪ್ರಸ್ತುತ ಅಸ್ಸಾಂ ರಾಜ್ಯದಲ್ಲಿನ ಹೈಡ್ರೋಜನ್ ಬಸ್‌ಗಳನ್ನು ಓಡಿಸಲು ಉತ್ಪಾದಿಸಿದ ಹೈಡ್ರೋಜನ್'ನ್ನು ನೈಸರ್ಗಿಕ ಅನಿಲದ ಜೊತೆಗೆ ಮಿಶ್ರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ಈ ಯೋಜನೆಯು 10 ಕೆಜಿ ದೈನಂದಿನ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ, ಮುಂದಿನ ದಿನಗಳಲ್ಲಿ ಇದನ್ನು ದಿನಕ್ಕೆ 30 ಕೆಜಿಗೆ ಹೆಚ್ಚಿಸಲಾಗುತ್ತದೆ ಎಂದಿದ್ದಾರೆ. ಹಾಗೆಯೇ ಈ ಹಸಿರು ಜಲಜನಕವು ಪಳೆಯುಳಿಕೆ ಇಂಧನಗಳನ್ನು ಬದಲಿಸುವ ಸಾಮರ್ಥ್ಯವನ್ನು ಹೊಂದಿದೆ. * ಈ ಸ್ಥಾವರವು ಕೇವಲ '03' ತಿಂಗಳ ಅವಧಿಯಲ್ಲಿ ದಾಖಲೆಯ ಕಾರ್ಯಾರಂಭ ಮಾಡಿದೆ. ಇದೀಗ ಅಸ್ತಿತ್ವದಲ್ಲಿರುವ 500kw ಸೌರ ಸ್ಥಾವರದಿಂದ 100 kw ಆನಿಯನ್ ಎಕ್ಸ್‌ಚೇಂಜ್ ಮೆಂಬರೇನ್ ಎಲೆಕ್ಟ್ರೋಲೈಸರ್ ಅರೇ ಬಳಸಿ ಉತ್ಪಾದಿಸುವ ವಿದ್ಯುತ್‌ನಿಂದ ಹಸಿರು ಹೈಡ್ರೋಜನ್'ನ್ನು ಸ್ಥಾವರದಲ್ಲಿ ಉತ್ಪಾದಿಸಲಾಗುತ್ತಿದೆ. ಪ್ರಸ್ತುತ ಭಾರತದಲ್ಲಿ ಇದೇ ಮೊದಲ ಬಾರಿಗೆ AEM ತಂತ್ರಜ್ಞಾನವನ್ನು ಬಳಕೆ ಮಾಡಲಾಗುತ್ತಿದೆ. * ನೈಸರ್ಗಿಕ ಅನಿಲ ಹಾಗೂ ಹಸಿರು ಹೈಡ್ರೋಜನ್ ಮಿಶ್ರಣ ಹಾಗೂ ಅಸ್ತಿತ್ವದಲ್ಲಿರುವ OIL ಮೂಲಸೌಕರ್ಯಗಳ ಮೇಲೆ ಅದರ ಪರಿಣಾಮದ ಕುರಿತು IIT ಗುವಾಹಟಿಯ ಸಹಯೋಗದ ಜೊತೆಗೆ ಆಯಿಲ್ ಇಂಡಿಯಾವು ಒಂದು ವಿವರವಾದ ಅಧ್ಯಯನವನ್ನು ಆರಂಭಿಸಿದೆ.