Job Description: * ಇತ್ತೀಚಿಗೆ ಪ್ರಧಾನಿ ನರೇಂದ್ರ ಮೋದಿ ಅವರು 'ಮೇಕ್ ಇನ್ ಇಂಡಿಯಾ' ಹಾಗೂ 'ಮೇಕ್ ಫಾರ್ ವರ್ಲ್ಡ್' ಉಪಕ್ರಮಗಳ ಭಾಗವಾಗಿ ಭಾರತೀಯ ರೈಲ್ವೆಯ ದಾಹೋಡ್ ಕಾರ್ಯಾಗಾರ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. * ಇದೀಗ ಈ ಯೋಜನೆಗಳಿಗೆ 20,000 ಕೋಟಿ ರೂ.ಗಳಿಗಿಂತಲೂ ಅಧಿಕವಾಗಿ ಹೂಡಿಕೆ ಮಾಡಲಾಗುತ್ತಿದೆ, ಇದೀಗ 1,200 ಅಧಿಕ ಅಶ್ವಶಕ್ತಿಯ 9,000 ಎಚ್‌ಪಿ(HP) ಲೋಕೋಮೋಟಿವ್'ಗಳನ್ನು ಉತ್ಪಾದಿಸುವ ಹಾಗೂ ಸಾವಿರಾರು ಜನರಿಗೆ ಉದ್ಯೋಗವನ್ನು ಕಲ್ಪಿಸುವ ನಿರೀಕ್ಷೆಯಿದೆ ಎಂದಿದ್ದಾರೆ. ಹಾಗೆಯೇ ಈ ದಾಹೋಡ್ ಕೇಂದ್ರವು ಮೇಕ್ ಇನ್ ಇಂಡಿಯಾದ ದೊಡ್ಡ ಕೇಂದ್ರವಾಗಲಿದೆ ಎಂದಿದ್ದಾರೆ. * ಇದೇ ಸಂಧರ್ಭದಲ್ಲಿ ಪ್ರಧಾನಮಂತ್ರಿ ಮೋದಿ ಅವರು ಸರಿ ಸುಮಾರು 550 ಕೋಟಿ ರೂ.ಗಳ ರಾಜ್ಯ ಸರ್ಕಾರದ ಅನೇಕ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರಭಾಯಿ ಪಟೇಲ್ ಹಾಗೂ ಕೆಲ ಸಚಿವರು ಪಾಲ್ಗೊಂಡಿದ್ದರು. * ದಾಹೋದ್ ಭಾರತದ ಗುಜರಾತ್ ರಾಜ್ಯದ ದಾಹೋದ್ ಜಿಲ್ಲೆಯ ದುಧಿಮತಿ ನದಿಯ ದಡದಲ್ಲಿರುವ ನಗರವಾಗಿದೆ. ದುಧುಮತಿ ನದಿಯ ದಡದಲ್ಲಿ ಆಶ್ರಮವನ್ನು ಹೊಂದಿದ್ದ ಸಂತ ದಧೀಚಿಯಿಂದ ಹೆಸರನ್ನು ಪಡೆದುಕೊಂಡಿದೆ. ಈ ನಗರವು ದಾಹೋದ್ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ. * ಈ ಹಿಂದೆ 2006 ರಲ್ಲಿ ದಾಹೋದ್ ಪ್ರತ್ಯೇಕ ಜಿಲ್ಲೆಯಾಗಿ ಗುರುತಿಸಲ್ಪಟ್ಟಿದೆ. ಅರ್ಬನ್ ಬ್ಯಾಂಕ್ ಆಸ್ಪತ್ರೆ ಈ ಜಿಲ್ಲೆಯಲ್ಲಿದೆ.