Job Description: * ಇದೀಗ ಟಾಟಾ ಸ್ಟೀಲ್ ರಷ್ಯಾ ಜೊತೆ ವಾಣಿಜ್ಯ ವಹಿವಾಟು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿಕೆ ನೀಡಿದೆ. ರಷ್ಯಾ-ಉಕ್ರೇನ್ ಯುದ್ಧದ ಹಿನ್ನಲೆಯಿಂದಾಗಿ ಕಂಪನಿ ಈ ತೀರ್ಮಾನ ಕೈಗೊಂಡಿದೆ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ. * ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವ ಹಿನ್ನಲೆಯಿಂದಾಗಿ ಕಂಪನಿಯು ಭಾರತ, ಬ್ರಿಟನ್‌ ಹಾಗೂ ನೆದರ್ಲೆಂಡ್ಸ್‌ನಲ್ಲಿರುವ ಎಲ್ಲ ಘಟಕಗಳಿಗೆ ಕಚ್ಚಾ ವಸ್ತುಗಳನ್ನು ಪರ್ಯಾಯ ಮೂಲಗಳಿಂದ ತರಿಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ. * ಟಾಟಾ ಸ್ಟೀಲ್ ಕಂಪನಿಯು ಭಾರತದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಭಾರತವು ಇತ್ತೀಚಿಗೆ ರಷ್ಯಾದಿಂದ ಸೀಮಿತ ಪ್ರಮಾಣದಲ್ಲಿ ಕಲ್ಲಿದ್ದಲು ಆಮದು ಮಾಡಿಕೊಳ್ಳುತಿತ್ತು. * ಟಾಟಾ ಸ್ಟೀಲ್ ಲಿಮಿಟೆಡ್ ಭಾರತೀಯ ಬಹುರಾಷ್ಟ್ರೀಯ ಉಕ್ಕು-ತಯಾರಿಕೆ ಕಂಪನಿಯಾಗಿದೆ, ಇದು ಜಮ್ಶೆಡ್‌ಪುರದಲ್ಲಿ ನೆಲೆಗೊಂಡಿದೆ ಹಾಗೂ ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. ಹಾಗೂ ಇದು ಟಾಟಾ ಸಮೂಹದ ಒಂದು ಭಾಗವಾಗಿದೆ. * ಈ ಹಿಂದೆ ಟಾಟಾ ಐರನ್ ಅಂಡ್ ಸ್ಟೀಲ್ ಕಂಪನಿ ಲಿಮಿಟೆಡ್ ಎಂದು ಕರೆಯುವ ಟಾಟಾ ಸ್ಟೀಲ್ ವಾರ್ಷಿಕವಾಗಿ 34 ಮಿಲಿಯನ್ ಟನ್‌ಗಳಷ್ಟು ವಾರ್ಷಿಕ ಕಚ್ಚಾ ಉಕ್ಕಿನ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅಗ್ರ ಉಕ್ಕು ಉತ್ಪಾದಿಸುವ ಕಂಪನಿಗಳಲ್ಲಿ ಇದು ಒಂದಾಗಿದೆ. ಇದು 2020 ರ ಮಾರ್ಚ್. 31 ರಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ 19.7 ಶತಕೋಟಿಯ ಏಕೀಕೃತ ವಹಿವಾಟು ದಾಖಲಿಸಿದೆ. ಈ ಕಂಪನಿಯು ಭಾರತದಲ್ಲಿ 2 ನೇ ಅತಿದೊಡ್ಡ ಉಕ್ಕು ಕಂಪನಿಯಾಗಿದೆ. * ಟಾಟಾ ಸ್ಟೀಲ್ ಭಾರತ, ನೆದರ್ಲ್ಯಾಂಡ್ಸ್ ಹಾಗೂ ಯುನೈಟೆಡ್ ಕಿಂಗ್‌ಡಮ್‌ ಹಾಗೂ ಇನ್ನು 26 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಸರಿ ಸುಮಾರು 80,500 ಜನರನ್ನು ನೇಮಕ ಮಾಡಿಕೊಂಡಿದೆ. 2019 ರ ಜುಲೈ ನಲ್ಲಿ ಟಾಟಾ ಸ್ಟೀಲ್ ಕಳಿಂಗನಗರನ್ನು ವಿಶ್ವ ಆರ್ಥಿಕ ವೇದಿಕೆಯ (WEF) ಗ್ಲೋಬಲ್ ಲೈಟ್‌ಹೌಸ್ ನೆಟ್‌ವರ್ಕ್‌ನ ಪಟ್ಟಿಯಲ್ಲಿ ಸೇರಿಸಲಾಗಿದೆ.