Job Description: * ಪ್ರಸ್ತುತ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡದ ನಾಯಕ ಕೀರನ್ ಪೊಲಾರ್ಡ್ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಣೆ ಮಾಡಿದ್ದಾರೆ. * ಕೀರನ್ ಆಡ್ರಿಯನ್ ಪೊಲಾರ್ಡ್ ಒಬ್ಬ ವೆಸ್ಟ್ ಇಂಡೀಸ್ ತಂಡದ ಕ್ರಿಕೆಟಿಗ. ಇವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ಹಾಗೂ ಸಿಪಿಎಲ್‌ನಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್‌ಗೆ ನಾಯಕರಾಗಿದ್ದರು. ಈ ಹಿಂದೆ ಇವರು 2010 ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ಗಾಗಿ ಆಡುವ ಅತಿ ಹೆಚ್ಚು ಸಂಭಾವನೆ ಪಡೆಯುವ ಆಟಗಾರರಾಗಿದ್ದರು. * 2019 ರ ಸೆಪ್ಟೆಂಬರ್ ನಲ್ಲಿ ಪೊಲಾರ್ಡ್ ವೆಸ್ಟ್ ಇಂಡೀಸ್‌ನ ಏಕದಿನ ಅಂತರಾಷ್ಟ್ರೀಯ (ODI) ಮತ್ತು ಟ್ವೆಂಟಿ 20 ಅಂತರಾಷ್ಟ್ರೀಯ (T20I) ತಂಡಗಳ ನಾಯಕರಾದರು. 2020 ರ ಮಾರ್ಚ್'ನಲ್ಲಿ ಪೊಲಾರ್ಡ್ 500 ಟ್ವೆಂಟಿ 20 ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟಿಗರಾದರು. * ಈ ಹಿಂದೆ 2021 ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಇವರು ಅಕಿಲ ದನಂಜಯ ಎಸೆದ ಒಂದು ಓವರ್‌ನಲ್ಲಿ ಆರು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಹರ್ಷಲ್ ಗಿಬ್ಸ್ ಹಾಗೂ ಯುವರಾಜ್ ಸಿಂಗ್ ನಂತರ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ 3ನೇ ಬ್ಯಾಟ್ಸ್‌ಮನ್ ಆಗಿದ್ದಾರೆ. ಹಾಗೂ 2022 ರ ಫೆಬ್ರವರಿಯಲ್ಲಿ ಭಾರತದ ವಿರುದ್ಧದ 2 ನೇ ಪಂದ್ಯದಲ್ಲಿ ಕಿರಣ್ ಪೊಲಾರ್ಡ್ ವೆಸ್ಟ್ ಇಂಡೀಸ್‌ಗಾಗಿ 100 T20I ಪಂದ್ಯಗಳಲ್ಲಿ ಆಡಿದ ಮೊದಲ ಕ್ರಿಕೆಟಿಗರಾಗಿದ್ದಾರೆ. * ಪೊಲಾರ್ಡ್‌ ಅವರು 2007ರಲ್ಲಿ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಇವರು 123 ಏಕದಿನ ಪಂದ್ಯಗಳನ್ನು ಆಡಿ 2,706 ರನ್ ಗಳಿಸಿದ್ದಾರೆ. ಹಾಗೂ ಟಿ-20 ಮಾದರಿಯಲ್ಲಿ 101 ಪಂದ್ಯಗಳನ್ನು ಆಡಿ 1,569 ರನ್ ಸಿಡಿಸಿದ್ದಾರೆ.