Job Description: * ಇತ್ತೀಚಿಗೆ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಭಾರತ ಪ್ರವಾಸ ಕೈಗೊಂಡಿದ್ದಾರೆ, ಈ ಪ್ರವಾಸದಲ್ಲಿ ಗುಜರಾತ್ ರಾಜ್ಯದಲ್ಲಿನ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿದ್ದಾರೆ. * ಇದೀಗ ಈ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡಿರುವ ಮೊದಲ ಪ್ರಧಾನಿ ಇವರಾಗಿದ್ದಾರೆ 'ಜಗತ್ತಿನ ಉತ್ತಮ ಬದಲಾವಣೆಗಾಗಿ ತತ್ವ ಮತ್ತು ಅಹಿಂಸೆಗಳ ಮಾರ್ಗ ಹಿಡಿಡಿರುವ ಅಸಾಧಾರಣ ವ್ಯಕ್ತಿ' ಎಂದು ಮಹಾತ್ಮ ಗಾಂಧಿಯವರನ್ನು ಹೊಗಳಿದ್ದಾರೆ. * 1947 ರ ನಂತರ ಗುಜರಾತ್ ರಾಜ್ಯದಲ್ಲಿನ ಸಬರ್ಮತಿ ಆಶ್ರಮಕ್ಕೆ ಭೇಟಿ ನೀಡುತ್ತಿರುವ ಮೊದಲ ಬ್ರಿಟನ್ ಪ್ರಧಾನಿ ಇವರಾಗಿದ್ದಾರೆ. * ಬ್ರಿಟನ್ ನ ಆಡಳಿತದಲ್ಲಿರುವವರು ಮಹಾತ್ಮ ಗಾಂಧಿಜೀ ಅವರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. * ಸಬರಮತಿ ಆಶ್ರಮವನ್ನು ಗಾಂಧಿ ಆಶ್ರಮ ಎಂದೂ ಕರೆಯುತ್ತಾರೆ. ಈ ಆಶ್ರಮವು ಗುಜರಾತ್‌ನ ಅಹಮದಾಬಾದ್‌ನ ಸಬರಮತಿ ಉಪನಗರದಲ್ಲಿದೆ, ಹಾಗೂ ಇದು ಸಬರಮತಿ ನದಿಯ ದಡದಲ್ಲಿದೆ. * ಮಹಾತ್ಮ ಗಾಂಧಿಯವರು ಭಾರತದಾದ್ಯಂತ ಪ್ರಯಾಣಿಸುತ್ತಿದ್ದ ಸಂಧರ್ಭದಲ್ಲಿ ಗುಜರಾತ್'ನ ಸಬರಮತಿ ಹಾಗೂ ಮಹಾರಾಷ್ಟ್ರದ ಸೇವಾಗ್ರಾಮ್ ದಲ್ಲಿ ವಾಸಿಸುತ್ತಿದ್ದ ಅನೇಕ ನಿವಾಸಗಳಲ್ಲಿ ಇದು ಕೂಡ ಒಂದಾಗಿದೆ. * ಗಾಂಧಿಯವರು ಈ ಆಶ್ರಮದಿಂದಲೇ 1930 ರ ಮಾರ್ಚ್. 12 ರಂದು ಉಪ್ಪಿನ ಸತ್ಯಾಗ್ರಹ ಎನ್ನುವ ದಂಡಿ ಮೆರವಣಿಗೆಯನ್ನು ಆರಂಭಿಸಿದ್ದರು. ಹಾಗೂ ಈ ಮೆರವಣಿಗೆಯು ಭಾರತದ ಸ್ವಾತಂತ್ರ್ಯ ಚಳವಳಿಯ ಮೇಲೆ ಪ್ರಭಾವವನ್ನು ಬೀರಿತ್ತು, ನಂತರದ ದಿನಗಳಲ್ಲಿ ಭಾರತ ಸರ್ಕಾರವು ಆಶ್ರಮವನ್ನು ರಾಷ್ಟ್ರೀಯ ಸ್ಮಾರಕವಾಗಿ ಸ್ಥಾಪಿಸಿದೆ.