Job Description: * ಇದೀಗ ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರ(NPPA)ವು ಮಧುಮೇಹ ಸೇರಿ ವಿವಿಧ ರೋಗಗಳ ಚಿಕಿತ್ಸೆಯಲ್ಲಿ ಬಳಕೆ ಮಾಡುವ 15 ಔಷಧಿಗಳ ಚಿಲ್ಲರೆ ಬೆಲೆಯನ್ನು ನಿಗದಿಪಡಿಸಿದೆ. * ಪ್ರಸ್ತುತ ಔಷಧಿಗಳನ್ನು ತಯಾರಿಸುವ ಕಂಪನಿಗಳು NPPA ಯ ಶಿಫಾರಸುಗಳ ಪ್ರಕಾರ ಹೊಸ ಚಿಲ್ಲರೆ ಬೆಲೆಯನ್ನು ನಿಗದಿಪಡಿಸಬೇಕಾಗುತ್ತದೆ ಎಂದಿದ್ದಾರೆ. ಇದೇ ಮಾರ್ಚ್. 24 ರಂದು ಜರುಗಿದ ಪ್ರಾಧಿಕಾರದ 96 ನೇ ಸಭೆಯಲ್ಲಿ ಇದರ ಬಗ್ಗೆ ನಿರ್ಧಾರವನ್ನು ಕೈಗೊಂಡಿದ್ದಾರೆ. ಇದೀಗ 2013 ರ ಔಷಧ ಬೆಲೆ ನಿಯಂತ್ರಣ ಆದೇಶದ ಅಡಿಯಲ್ಲಿ 15 ಔಷಧಿಗಳ ಚಿಲ್ಲರೆ ಬೆಲೆಯನ್ನು NPPA ನಿಗದಿಪಡಿಸಿದೆ. * ಔಷಧಿಗಳ ಚಿಲ್ಲರೆ ಬೆಲೆ ನಿಗದಿ ಪಡಿಸಿರುವ ಪ್ರಕಾರ ಅಸೋಸಿಯೇಟೆಡ್ ಬಯೋಟೆಕ್, ಡೆಲ್ಸ್ ಲ್ಯಾಬೋರೇಟರೀಸ್‌ನಿಂದ ಸಿದ್ಧಪಡಿಸಿರುವ ಹಾಗೂ ಮಾರಾಟ ಮಾಡುವ ಮೆಟ್‌ಫಾರ್ಮಿನ್ ಜೊತೆಗೆ ಟೆನೆಲಿಗ್ಲಿಪ್ಟಿನ್ ಟ್ಯಾಬ್ಲೆಟ್‌ಗಳ ಪ್ರತಿ ಟ್ಯಾಬ್ಲೆಟ್‌ಗೆ 7.14 ರೂ. ಹಾಗೂ ಡಪಾಗ್ಲಿಫ್ಲೋಜಿನ್ ಇರುವ ಮೆಟ್‌ಫಾರ್ಮಿನ್ ಹೈಡ್ರೋಕ್ಲೋರೈಡ್ ಮಾತ್ರೆಯ ಪ್ರತಿ ಟ್ಯಾಬ್ಲೆಟ್‌ಗೆ 10.7 ರೂ.ಗೆ ನಿಗದಿಪಡಿಸಲಾಗಿದೆ. ಮಧುಮೇಹಕ್ಕೆ ಚಿಕಿತ್ಸೆಗಳಿಗಾಗಿ ಈ ಎರಡೂ ಔಷಧಿಗಳನ್ನು ಬಳಸಲಾಗುತ್ತದೆ. * ಪ್ರಸ್ತುತ ಇಂಟಿಗ್ರೇಟೆಡ್ ಡ್ರಗ್ ಡೇಟಾಬೇಸ್ ಮ್ಯಾನೇಜ್‌ಮೆಂಟ್ ಸಿಸ್ಟಮ್'ನ ಮುಖಾಂತರ ಔಷಧಿ ತಯಾರಕರು ನಿಯಂತ್ರಕರಿಗೆ ಬೆಲೆ ಪಟ್ಟಿಯನ್ನು ಒದಗಿಸುತ್ತಾರೆ. ಹಾಗೂ ಆ ಬೆಲೆಯ ಪ್ರತಿಯನ್ನು ರಾಜ್ಯದ ಡ್ರಗ್ ಕಂಟ್ರೋಲರ್ ಮತ್ತು ಡೀಲರ್‌ಗಳಿಗೆ ನೀಡಲಾಗುತ್ತದೆ ಎಂದಿದ್ದಾರೆ.