Job Description: * ಇದೇ ಏಪ್ರಿಲ್ 24 ರಿಂದ ಮೇ 3 ರವರೆಗೆ ರಾಜಧಾನಿ ಬೆಂಗಳೂರಿನ '05' ಕ್ರೀಡಾಂಗಣಗಳಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಾಗಿ ಕರ್ನಾಟಕ ಸರ್ಕಾರ ಜೈನ್ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಸಹಯೋಗದ ಜೊತೆಗೆ ಖೇಲೋ ಇಂಡಿಯಾ ಯೂನಿ ಆಯಪ್(APP) ವಿನ್ಯಾಸಗೊಳಿಸಿ ಸಿದ್ದಪಡಿಸಿದೆ. * ಇದೀಗ ಈ ಆಯಪ್ ನ್ನು ಭಾರತದ ಕ್ರೀಡಾ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ವಿಶೇಷ ತಂತ್ರಜ್ಞಾನದ ಮೂಲಕ ಸಿದ್ದಪಡಿಸಲಾಗಿದೆ, ಸದ್ಯ ಈ ಆಪ್ ಪ್ಲೇ ಸ್ಟೋರ್ ಹಾಗೂ ಗೂಗಲ್ ಪ್ಲೇಗಳಲ್ಲಿ ಲಭ್ಯವಿದೆ, ಹಾಗೂ ಇದನ್ನು ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದಾಗಿದೆ. * ಈ ಆಯಪ್ ನ ಮೂಲಕ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಅನೇಕ ವಿಶ್ವವಿದ್ಯಾಲಯಗಳು, ಕ್ರೀಡಾಪಟುಗಳು, ಕ್ರೀಡೆಗಳ ವೇಳಾಪಟ್ಟಿ, ಹಾಗೂ ಎಲ್ಲ ಕ್ರೀಡಾಪಟುಗಳ ವೈಯಕ್ತಿಕ ವೇಳಾಪಟ್ಟಿ, ಇದೇ ರೀತಿಯಲ್ಲಿ ಇನ್ನಿತರ ಮಾಹಿತಿ ಲಭ್ಯವಾಗಲಿದೆ ಎಂದಿದ್ದಾರೆ. * ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ (KIUG), ಭಾರತದಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಬಹು-ಕ್ರೀಡಾ ಕಾರ್ಯಕ್ರಮವಾಗಿದೆ, ದೇಶಾದ್ಯಂತದ ವಿಶ್ವವಿದ್ಯಾನಿಲಯಗಳ ಕ್ರೀಡಾಪಟುಗಳು ವಿವಿಧ ಕ್ರೀಡಾ ವಿಭಾಗಗಳಲ್ಲಿ ಸ್ಪರ್ಧಿಸುತ್ತಾರೆ. ಇತ್ತೀಚಿಗೆ ಒಡಿಶಾದಲ್ಲಿ ನಡೆದ ಉದ್ಘಾಟನಾ ಆವೃತ್ತಿಯು ಫೆಬ್ರವರಿ. 22 ರಂದು ಆರಂಭವಾಗಿ ಹಾಗೂ 2020 ರ ಮಾರ್ಚ್. 01 ರಂದು ಮುಕ್ತಾಯವಾಗಿದೆ. ಇದನ್ನು ಭಾರತೀಯ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯವು ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ, ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಹಾಗೂ ರಾಷ್ಟ್ರೀಯ ಕ್ರೀಡಾ ಒಕ್ಕೂಟದ ಜೊತೆಯಾಗಿ ಆಯೋಜಿಸಿವೆ. ಇದೊಂದು ಭಾರತದಲ್ಲಿನ ಅತಿದೊಡ್ಡ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾ ಸ್ಪರ್ಧೆಯಾಗಿದೆ. * 2020 ರಲ್ಲಿ 3 ನೇ ಆವೃತ್ತಿಯನ್ನು ಪೂರ್ಣಗೊಳಿಸಿದ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನ ಯಶಸ್ಸಿನ ನಂತರ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನ್ನು ಆರಂಭಿಸಲಾಗಿದೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಒಲಿಂಪಿಕ್ಸ್ ಹಾಗೂ ಏಷ್ಯನ್ ಗೇಮ್ಸ್‌ಗಾಗಿ 18 ರಿಂದ 25 ವರ್ಷ ವಯಸ್ಸಿನ ಸಮರ್ಥ ಕ್ರೀಡಾಪಟುಗಳನ್ನು ಗುರುತಿಸಿ ತರಬೇತಿ ನೀಡಲು ಉದ್ದೇಶಿಸಲಾಗಿದೆ.