Job Description: * ಏಷ್ಯನ್‌ ಕುಸ್ತಿ ಚಾಂಪಿಯನ್‌ಶಿಪ್‌ ನ ಮೊದಲ ದಿನದಂದು ಭಾರತಕ್ಕೆ 3 ಕಂಚಿನ ಪದಕಗಳನ್ನು ಜಯಿಸಿದೆ. ಗ್ರೀಕೋ ರೋಮನ್‌ ವಿಭಾಗದಲ್ಲಿ ಕಣಕ್ಕಿಳಿದ ಐದು ಸ್ಪರ್ಧಿಗಳಲ್ಲಿ ಮೂರೂ ಜನಕ್ಕೆ ಪದಕ ಲಭಿಸಿದೆ. ಈ ಸ್ಪರ್ಧೆಯಲ್ಲಿ ಸುನೀಲ್‌ ಕುಮಾರ್‌, ಅರ್ಜುನ್‌ ಹಾಲಕುರ್ಕಿ ಮತ್ತು ನೀರಜ್‌ ಅವರು ಕಂಚಿನ ಪದಕವನ್ನು ಪಡೆದಿದ್ದಾರೆ. * ಏಷ್ಯನ್‌ ಚಾಂಪಿಯನ್‌ಶಿಪ್‌ ಕುಸ್ತಿ ಸ್ಪರ್ಧೆಯಲ್ಲಿ ಸುನೀಲ್‌ ಕುಮಾರ್‌ 87 ಕೆಜಿ ವಿಭಾಗದಲ್ಲಿ ಪದಕ ಜಯಿಸಿ ಕೊಂಡಿದ್ದಾರೆ. * 55 ಕೆಜಿ ವಿಭಾಗದಲ್ಲಿ ಅರ್ಜುನ್‌ ಅವರು ಕಂಚಿನ ಪದಕವನ್ನು ಜಯಿಸಿದ್ದಾರೆ. * 63 ಕೆಜಿ ವಿಭಾಗದಲ್ಲಿ ನೀರಜ್‌ ಅವರು ಕಂಚಿನ ಪದಕವನ್ನು ಸಾಧಿಸಿದ್ದಾರೆ.