Job Description: ಭಾರತೀಯ ವಾಯುಪಡೆಯು (IAF) ಭಾರತೀಯ ನೌಕಾಪಡೆಯ ಸಹಯೋಗದಿಂದ ಪೂರ್ವ ಸಮುದ್ರ ತೀರದಲ್ಲಿ Su30-MkI ವಿಮಾನದ ಮೂಲಕ ಬ್ರಹ್ಮೋಸ್ ಕ್ಷಿಪಣಿಯನ್ನ ಯಶಸ್ವಿಯಾಗಿ ಪರೀಕ್ಷಿಸಿದೆ. ಇತ್ತೀಚಿಗೆ ಪೂರ್ವ ಸಮುದ್ರ ತೀರದಲ್ಲಿ 'IAF Su30-MkI' ವಿಮಾನ ಬಳಸಿಕೊಂಡು ಬ್ರಹ್ಮೋಸ್ ಕ್ಷಿಪಣಿಯ ಉಡಾವಣೆಯನ್ನು ನಡೆಸಲಾಗಿದೆ. * ಇದೀಗ ಈ ಕ್ಷಿಪಣಿಯು ಭಾರತೀಯ ನೌಕಾಪಡೆಯ ಹಡಗನ್ನು ನಿಷ್ಕ್ರಿಯಗೊಳಿಸಿದ ಗುರಿಯ ಮೇಲೆ ನೇರ ಹೊಡೆತವನ್ನು ಸಾಧಿಸಿದೆ. * ಬ್ರಹ್ಮೋಸ್ ಕ್ಷಿಪಣಿ, IAF ಗೆ ಸಮುದ್ರ ಅಥವಾ ಭೂಮಿಯ ಯಾವುದೇ ಗುರಿಯ ಮೇಲೆ ಹಗಲು ಅಥವಾ ರಾತ್ರಿ ವೇಳೆಯಲ್ಲಿನ ಎಲ್ಲಾ ಹವಾಮಾನ ಪರಿಸ್ಥಿತಿಗಳಲ್ಲಿ ನಿಖರವಾದ ಗುರಿಗಳ ಮೂಲಕ ದಾಳಿ ಮಾಡುವ ಬಹು ನಿರೀಕ್ಷಿತ ಸಾಮರ್ಥ್ಯವನ್ನು ಹೊಂದಿದೆ. ಈ ಕ್ಷಿಪಣಿಯ ಸಾಮರ್ಥ್ಯ ಹಾಗೂ su30ಎಂಕೆಐ ವಿಮಾನದ ಹೆಚ್ಚಿನ ಕಾರ್ಯಕ್ಷಮತೆಯು IAF ಗೆ ವ್ಯಾಪ್ತಿಯನ್ನು ನೀಡಲಿದೆ. * ಭಾರತವು ಹೆಲಿನಾದಲ್ಲಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಆಂಟಿ-ಟ್ಯಾಂಕ್ ಗೈಡೆಡ್ ಮಿಸೈಲ್ ನ್ನು ಉನ್ನತ ಎತ್ತರದಲ್ಲಿ ಸುಧಾರಿತ ಲಘು ಹೆಲಿಕಾಪ್ಟರ್ ನ ಮೂಲಕ ಯಶಸ್ವಿಯಾಗಿ ಪರೀಕ್ಷಿಸಿದೆ. ಇತ್ತೀಚಿಗೆ ಈ ಪರೀಕ್ಷೆಯನ್ನು ರಾಜಸ್ಥಾನದ ಪೋಖ್ರಾನ್ ಫೈರಿಂಗ್ ರೇಂಜ್‌ನಲ್ಲಿ ಕೈಗೊಂಡಿರುವ ಸರಣಿ ಪ್ರಯೋಗಗಳ ಹಿನ್ನೆಲೆಯಲ್ಲಿ ಈ ಪರೀಕ್ಷೆ ನಡೆಸಲಾಗಿದೆ ಎಂದಿದ್ದಾರೆ. * ಸುಖೋಯ್ Su-30MKI ಎಂಬುದು ಟ್ವಿನ್‌ಜೆಟ್ ಮಲ್ಟಿರೋಲ್ ಏರ್ ಸುಪೀರಿಯಾರಿಟಿ ಫೈಟರ್ ಆಗಿದೆ, ಇದನ್ನು ರಷ್ಯಾದ ಸುಖೋಯ್ ಅಭಿವೃದ್ಧಿಪಡಿಸಿದೆ ಹಾಗೂ ಭಾರತೀಯ ವಾಯುಪಡೆಗಾಗಿ ಭಾರತದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಪರವಾನಗಿ ಅಡಿಯಲ್ಲಿ ನಿರ್ಮಿಸಲಾಗಿದೆ. * ಭಾರತವು ಈ ಹಿಂದೆ 2000 ರಲ್ಲಿ ರಷ್ಯಾ ದೇಶದ ಜೊತೆಗೂಡಿ 140 Su-30 ಫೈಟರ್ ಜೆಟ್‌ಗಳನ್ನು ತಯಾರಿಸಲು ಒಪ್ಪಂದಕ್ಕೆ ಸಹಿ ಹಾಕಿದ ನಂತರ ರೂಪಾಂತರದ ಅಭಿವೃದ್ಧಿ ಆರಂಭವಾಗಿದೆ. ಈ ಮೊದಲ ರಷ್ಯನ್ ನಿರ್ಮಿತ Su-30MKI ರೂಪಾಂತರವನ್ನು 2002 ರಲ್ಲಿ ಭಾರತೀಯ ವಾಯುಸೇನೆಗೆ ಸ್ವೀಕರಿಸಲಾಗಿದೆ. ಇದೀಗ ಭಾರತವು 2020 ರ ಜನವರಿ ವೇಳೆಗೆ IAF ಸುಮಾರು 260 Su-30MKI ಗಳನ್ನು ದಾಸ್ತಾನು ಹೊಂದಿದೆ. * ಈ Su-30MKI ವಿಮಾನಗಳನ್ನೂ ಭಾರತೀಯ ವಿಶೇಷಣಗಳಿಗೆ ತಕ್ಕಂತೆ ತಯಾರಿಸಲ್ಪಟ್ಟಿದೆ ಹಾಗೂ ಭಾರತೀಯ ವ್ಯವಸ್ಥೆಗಳು ಹಾಗೂ ಏವಿಯಾನಿಕ್ಸ್ ಜೊತೆಗೆ ಫ್ರೆಂಚ್ ಮತ್ತು ಇಸ್ರೇಲಿ ಉಪ-ವ್ಯವಸ್ಥೆಗಳನ್ನು ಸಂಯೋಜಿಸುತ್ತದೆ.