Job Description: * ತೆಲಂಗಾಣ ಸರ್ಕಾರವು 2022 ರ ಏಪ್ರಿಲ್. 19 ರಂದು ತನ್ನ ಮೊದಲ ಬಾಹ್ಯಾಕಾಶ ತಂತ್ರಜ್ಞಾನದ ಚೌಕಟ್ಟನ್ನು ಆರಂಭಿಸಿದೆ. ಬಾಹ್ಯಾಕಾಶ ತಂತ್ರಜ್ಞಾನಕ್ಕಾಗಿ ರಾಜ್ಯವನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ತಾಣವಾಗಿ ಸ್ಥಾಪಿಸುವ ದೃಷ್ಟಿಯೊಂದಿಗೆ ಈ ಚೌಕಟ್ಟನ್ನು ಪ್ರಾರಂಭಿಸಲಾಗಿದೆ. * ಈ ಉಡಾವಣಾ ಕಾರ್ಯಕ್ರಮವನ್ನು ಮೆಟಾವರ್ಸ್‌ನಲ್ಲಿ ಆಯೋಜಿಸಲಾಗಿದೆ, ಹಾಗೂ ಇದು ದೇಶದ ಮೊದಲ ಅಧಿಕೃತ ಕಾರ್ಯಕ್ರಮವಾಗಿದೆ, ಈ ಚೌಕಟ್ಟಿನ ಮೂಲಕ, ತೆಲಂಗಾಣ ರಾಜ್ಯವು ಆವಿಷ್ಕಾರಗಳನ್ನು ಬೆಂಬಲಿಸುತ್ತದೆ. ಹಾಗೆಯೇ 2026 ರ ವೇಳೆಗೆ, ಬಾಹ್ಯಾಕಾಶ ಉದ್ಯಮವು USD 558 ಶತಕೋಟಿಗೆ ಬೆಳೆಯುವ ನಿರೀಕ್ಷೆಯಿದೆ ಎಂದಿದ್ದಾರೆ. * ಕೇಂದ್ರ ಸರ್ಕಾರವು ಮಾಡಿರುವ ಇತ್ತೀಚಿನ ಸುಧಾರಣೆಗಳಿಗೆ ಅನುಗುಣವಾಗಿ ಬಾಹ್ಯಾಕಾಶ ಉದ್ಯಮದ ವಲಯದಲ್ಲಿ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸುವುದು ಚೌಕಟ್ಟಿನ ಗುರಿಯಾಗಿದೆ. * ಹೈದರಾಬಾದ್ ಮೂಲದ ಟೆಕ್ ಕಂಪನಿಯಾದ ಗ್ಯಾಮಿಟ್ರೋನಿಕ್ಸ್ ಈ ಕಾರ್ಯಕ್ರಮಕ್ಕಾಗಿ ಬ್ಲಾಕ್‌ಚೈನ್ ತಂತ್ರಜ್ಞಾನವನ್ನು ರಚಿಸಿದೆ ಹಾಗೂ ಟೆಕ್ ಸಂಸ್ಥೆ ಪಾರ್ಟಿನೈಟ್ ಮೆಟಾವರ್ಸ್ ಪ್ಲಾಟ್‌ಫಾರ್ಮ್'ನ್ನು ಆರಂಭಿಸಿದೆ. * ಈ ಕಾರ್ಯಕ್ರಮದ ಕೊನೆಯಲ್ಲಿ, NFT ಸಂಗ್ರಹವನ್ನು ಆರಂಭಿಸಲಾಗಿದೆ. ಈ ಸಂಗ್ರಹಣೆಯ ಮಾರಾಟದಿಂದ ಬರುವ ಆದಾಯವನ್ನು ತಂತ್ರಜ್ಞಾನ-ಸಕ್ರಿಯಗೊಳಿಸಿರುವ ರಾಜ್ಯ ಸರ್ಕಾರದ ಸಾಮಾಜಿಕ ಪರಿಣಾಮದ ಯೋಜನೆಗಳಲ್ಲಿ ಒಂದಕ್ಕೆ ಬೆಂಬಲ ನೀಡಲಾಗುತ್ತದೆ ಎಂದಿದ್ದಾರೆ.