Job Description: * ಇದೀಗ ದೇಶದ ಆಯುಷ್ ಉತ್ಪನ್ನಗಳ ಗುಣಮಟ್ಟ ದೃಢೀಕರಿಸುವುದಕ್ಕಾಗಿ "ಆಯುಷ್ ಮಾರ್ಕ್" ಪ್ರಾರಂಭಿಸುವದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. * ಜಾಗತಿಕ ಆಯುಷ್ ಹೂಡಿಕೆ ಶೃಂಗಸಭೆಯನ್ನು ಗುಜರಾತ್‌ ರಾಜ್ಯದ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ನಡೆಸಲಾಗಿದೆ, ಪ್ರಸ್ತುತ ಆಯುಷ್ ಉತ್ಪನ್ನಗಳ ಗುಣಮಟ್ಟಕ್ಕೆ ಕಾರಣವಾಗುವ ಸಾಂಪ್ರದಾಯಿಕ ಔಷಧ ಉತ್ಪನ್ನಗಳನ್ನು ಗುರುತಿಸಿ ಅವುಗಳನ್ನು ದೃಢೀಕರಿಸಲಾಗುತ್ತದೆ ಎಂದಿದ್ದಾರೆ. ಹಾಗೆಯೇ ಸಾಂಪ್ರದಾಯಿಕ ಚಿಕಿತ್ಸೆಗಳಿಗಾಗಿ ಭಾರತಕ್ಕೆ ಆಗಮಿಸುವವರಿಗೆ 'ಆಯುಷ್ ವೀಸಾ' ಕೆಟಗರಿಯನ್ನೂ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದ್ದಾರೆ. * ಇದೀಗ ಪ್ರಧಾನಿ ಮೋದಿ ಅವರು ಆಯುಷ್‌ನಲ್ಲಿ ಸಂಶೋಧನೆ ಹಾಗೂ ಹೂಡಿಕೆಗೆ ಕರೆ ನೀಡಿದ್ದಾರೆ, ಇದರಿಂದಾಗಿ ರೈತರ ಆದಾಯ ಹಾಗೂ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದ್ದಾರೆ. * ಪ್ರಸ್ತುತ ಆಯುಷ್ ಔಷಧಿಗಳು ಕೊರೊನಾ ಸಾಂಕ್ರಾಮಿಕ ಸಮಯದಲ್ಲಿ ವ್ಯಾಪಕ ಕೊಡುಗೆಗಳನ್ನೂ ನೀಡಿವೆ. ಇದೀಗ ಆಯುಷ್‌ನಲ್ಲಿ ಹೂಡಿಕೆ ಹಾಗೂ ಸಂಶೋಧನೆಯನ್ನು ಹೆಚ್ಚಿಸುವ ಅಗತ್ಯವಿದೆ, ಇದರಿಂದಾಗಿ ವಿಶ್ವದ ಹೆಚ್ಚಿನ ಜನಸಂಖ್ಯೆಗೆ ಉತ್ತಮ ಆರೋಗ್ಯ ಸೇವೆಗಳನ್ನು ಕಲ್ಪಿಸಬಹುದಾಗಿದೆ. ಆಯುಷ್ ಕ್ಷೇತ್ರದಲ್ಲಿ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಳ್ಳುವ ಮೂಲಕ ರೈತರ ಆದಾಯವನ್ನು ಹೆಚ್ಚಿಸುವ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಲಿದೆ. ಲಸಿಕೆಯನ್ನು ಅಭಿವೃದ್ಧಿಪಡಿಸಲು ಹಾಗೂ ಸಾಂಕ್ರಾಮಿಕ ರೋಗದ ವಿರುದ್ಧ ತೀವ್ರವಾಗಿ ಹೋರಾಡಲು ಸಂಬಂಧಪಟ್ಟ ಕಂಪನಿಗಳಿಗೆ ಬಂಡವಾಳ ಲಭ್ಯಗೊಳಿಸವಂತಹ ಕಾರ್ಯಗಳನ್ನು ಮಾಡಲಾಗಿದೆ ಎಂದಿದ್ದಾರೆ. * ಆಯುಷ್ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಿಸುವ ಅಗತ್ಯವಿದೆ, ಸಂಶೋಧನೆ ಹಾಗೂ ಆವಿಷ್ಕಾರಕ್ಕೆ ಹೆಚ್ಚಿನ ಒಲವು ನೀಡಲಾಗಿದೆ ಹೊಸ ಸಾಧ್ಯತೆಗಳು ಆರಂಭವಾಗಲಿವೆ ಎಂದಿದ್ದಾರೆ. ಈ ಹಿಂದೆ 2014 ರಲ್ಲಿ ಕೇವಲ '03' ಬಿಲಿಯನ್ ಡಾಲರ್‌ಗಳಷ್ಟಿದೆ, ಇದೀಗ 18 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದಿದ್ದಾರೆ. ಮುಂಬರುವ 25 ವರ್ಷಗಳಲ್ಲಿ ಆಯುಷ್ ವಲಯವು ಆರೋಗ್ಯ ಕ್ಷೇತ್ರದಲ್ಲಿ ಪ್ರಮುಖ ಕೊಡುಗೆಯನ್ನು ನೀಡಲಿದೆ ಎಂದಿದ್ದಾರೆ. *ವಿಶ್ವದಲ್ಲಿ ಆಯುಷ್ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ಆಯುಷ್‌ನ ಮಾರುಕಟ್ಟೆ ವೇಗವಾಗಿ ಬೆಳವಣಿಗೆಯನ್ನು ಕಾಣುತ್ತಿದೆ. ಇದೀಗ ಆಯುಷ್ ಸ್ಟಾರ್ಟಪ್‌ಗಳಿಗೆ ಸರ್ಕಾರ ಉತ್ತೇಜನ ನೀಡುತ್ತಿದೆ. * ಭಾರತ ದೇಶವು ಗಿಡಮೂಲಿಕೆ ಔಷಧಿಗಳ ಅಗಾಧವಾದ ಸಂಪತನ್ನು ಹೊಂದಿದೆ. ಈ ಸಂಪತ್ತಿಗೆ 'ಹಸಿರು ಚಿನ್ನ' ಎನ್ನಲಾಗುತ್ತದೆ. ಇದೀಗ ಭಾರತವು 50 ದೇಶಗಳ ಜೊತೆಗೆ ಆಯುಷ್ ಉತ್ಪನ್ನಗಳ ವಿನಿಮಯದ ಒಪ್ಪಂದಗಳಿಗೆ ಸರ್ಕಾರ ಸಹಿ ಹಾಕಿದೆ. ಪ್ರಸ್ತುತ ಭಾರತೀಯ ಆಯುಷ್ ಉತ್ಪನ್ನಗಳಿಗೆ ವಿಶ್ವದಾದ್ಯಂತ ಮಾರುಕಟ್ಟೆಗಳನ್ನು ಆರಂಭಿಸಲಾಗುತ್ತಿದೆ, ಇವುಗಳಿಂದಾಗಿ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ವಿದೇಶಿಗರಿಗೆ ಸಹಾಯವಾಗಲಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.