Job Description: * ಪ್ರಸ್ತುತ ಬ್ರಿಟನ್ ನ್ಯಾಯಾಲಯವು ವಿಕಿಲೀಕ್ಸ್ ಸಂಸ್ಥಾಪಕರಾಗಿರುವ 'ಜೂಲಿಯನ್ ಅಸ್ಸಾಂಜೆ'ಯನ್ನು ಅಮೆರಿಕಕ್ಕೆ ಗಡಿಪಾರು ಮಾಡಲು ಆದೇಶವನ್ನು ಹೊರಡಿಸಿದೆ. ಇದೀಗ ಆಂತರಿಕ ಸಚಿವೆ ಪ್ರೀತಿ ಪಟೇಲ್ ಗಡಿಪಾರು ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಿದೆ ಎಂದಿದ್ದಾರೆ. * ಇರಾಕ್ ಹಾಗು ಅಘ್ಫಾನಿಸ್ತಾನದ ಯುದ್ಧಗಳಿಗೆ ಸಂಬಂಧಿಸಿದಂತೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಿದ ಪ್ರಕರಣದ ವಿಚಾರಣೆಯ ಹಿನ್ನಲೆಯಿಂದಾಗಿ ಜೂಲಿಯನ್ ಅಸ್ಸಾಂಜೆ ಅಮೆರಿಕಕ್ಕೆ ಬೇಕಾಗಿದ್ದಾರೆ ಎನ್ನಲಾಗಿದೆ, ಇದೀಗ ಅಮೆರಿಕ ಬೇಹುಗಾರಿಕೆ ಕಾನೂನಿನ ಉಲ್ಲಂಘನೆ ಸೇರಿದಂತೆ 18 ಪ್ರಕರಣಗಳನ್ನು ಅವರ ವಿರುದ್ಧ ದಾಖಲಿಸಲಾಗಿದೆ ಎಂದಿದ್ದಾರೆ. * ಪ್ರಸ್ತುತ ಜೂಲಿಯನ್ ಅಸ್ಸಾಂಜೆ ಅವರು ಆಸ್ಟ್ರೇಲಿಯಾ ಮೂಲದವರಾಗಿದ್ದರೆ, ಇವರು ಅಮೆರಿಕದ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಆ ಸಂಧರ್ಭದಲ್ಲಿ ಅಮೇರಿಕ ಸೇನೆಯ ಅನೇಕ ದಾಖಲೆಗಳನ್ನು ಸಂಗ್ರಹ ಮಾಡಿದ್ದರು, ಹಾಗು ಆ ಮಾಹಿತಿಯನ್ನು ತಮ್ಮ ವಿಕಿಲೀಕ್ಸ್ ತಾಣದ ಮೂಲಕ ಬಿಡುಗಡೆ ಮಾಡಿದ್ದರು. ಆದರೆ ಇವರು ಬಿಡುಗಡೆ ಮಾಹಿತಿಯಲ್ಲಿ ಅಮೇರಿಕ ಸೇನೆಯು ಇರಾಕ್ ಹಾಗೂ ಅಫ್ಘಾನಿಸ್ತಾನದಲ್ಲಿ ನಡೆಸಿದ ದೌರ್ಜನ್ಯಗಳ ಬಗ್ಗೆ ವಿವರವಾಗಿ ಹೇಳಲಾಗಿತ್ತು ಎನ್ನಲಾಗಿದೆ. * ಅಮೇರಿಕ ದೇಶವು ಬಿಡುಗಡೆಯಾಗಿರುವ ದಾಖಲೆಯನ್ನು ಗಂಭೀರವಾಗಿ ಪರಿಗಣಿಸಿ ಜೂಲಿಯನ್ ಅಸ್ಸಾಂಜೆ ವಿರುದ್ಧ ದೇಶದ್ರೋಹ ಸೇರಿ ಇನ್ನಿತರ 18 ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳ ವಿಚಾರಣೆಗಾಗಿ ಅಸ್ಸಾಂಜೆ ಅಮೆರಿಕಕ್ಕೆ ಬೇಕಾಗಿದ್ದಾರೆ ಎನ್ನಲಾಗಿದೆ.