Job Description: * ಚೀನಾದ 3 ಗಗನಯಾತ್ರಿಗಳು ಕಳೆದ 6 ತಿಂಗಳಿಂದ ಚೀನಾದ ಹೊಸ ಬಾಹ್ಯಾಕಾಶ ನಿಲ್ದಾಣದಲ್ಲಿ (ಟಿಯಾನ್‌ಗಾಂಗ್‌ ಸ್ಪೇಸ್‌ ಸ್ಟೇಷನ್‌)ದ್ದು ಇದೀಗ ಸುರಕ್ಷಿತವಾಗಿ ಭೂಮಿಗೆ ಮರಳಿದ್ದಾರೆ. ಈ ಮೂಲಕ ಬಾಹ್ಯಾಕಾಶದಲ್ಲಿ ಅತಿಹೆಚ್ಚು ದಿನಗಳ ಕಾಲ ಕಳೆದ ದಾಖಲೆಯನ್ನು ಈ 3 ಗಗನಯಾತ್ರಿಗಳು ನಿರ್ಮಿಸಿದ್ದಾರೆ. * '03' ಗಗನಯಾತ್ರಿಗಳಾಗಿರುವ ಝೈ ಝಿಗಾಂಗ್‌, ವಾಂಗ್‌ ಯಾಪಿಂಗ್‌ ಹಾಗೂ ಯೆ ಗುವಾಂಗ್‌ಫು ಅವರನ್ನು ಹೊತ್ತಿರುವ ಶೆನ್‌ಝೌ-13 ಕ್ಯಾಪ್ಸೂಲ್‌ (Shenzhou-13 capsule) ನೌಕೆಯು ಚೀನಾದ ಗೊಬಿ ಮರುಭೂಮಿಯಲ್ಲಿರುವ ಡೊಂಗ್‌ಫೆಂಗ್‌ ಲ್ಯಾಂಡಿಂಗ್‌ ಪ್ರದೇಶದಕ್ಕೆ ಬಂದು ತಲುಪಿದೆ ಎಂದು ಚೀನಾದ ಸುದ್ದಿವಾಹಿನಿಯು ಈ ಬಗ್ಗೆ ಮಾಹಿತಿ ನೀಡಿದೆ. * ಚೀನಾದ ಈ '03' ಗಗನಯಾತ್ರಿಗಳು ಆರೋಗ್ಯವಾಗಿದ್ದರೆ ಎಂದು ವೈದ್ಯಕೀಯ ಪರೀಕ್ಷೆಗಳ ಮೂಲಕ ತಿಳಿದು ಬಂದಿದೆ. ಹಾಗೆಯೇ ಮಾನವ ಸಹಿತ ಶೆನ್‌ಝೌ-13 ಯೋಜನೆಯು ಯಶಸ್ವಿಯಾಗಿದೆ ಎಂದು ಗ್ಲೋಬಲ್‌ ಟೈಮ್ಸ್‌ ಸುದ್ದಿವಾಹಿನಿ ಈ ಬಗ್ಗೆ ಮಾಹಿತಿ ನೀಡಿದೆ. * ಈ ಹಿಂದೆ ಶೆನ್‌ಝೌ-12 ಯೋಜನೆಯಲ್ಲಿ ಗಗನಯಾತ್ರಿಗಳು 92 ದಿನಗಳನ್ನು ಟಿಯಾನ್‌ಗಾಂಗ್‌ ಸ್ಪೇಸ್‌ ಸ್ಟೇಷನ್‌ನಲ್ಲಿ ಕಳೆದಿದ್ದಾರೆ, ಇದೀಗ ಆ '03' ಗಗನಯಾತ್ರಿಗಳು ಸುರಕ್ಷಿತವಾಗಿ ಮರಳಿದ್ದಾರೆ. ಈ ಗಗನಯಾತ್ರಿಗಳು ಕೇವಲ 8 ಗಂಟೆಗಳಲ್ಲಿ ಬಾಹ್ಯಾಕಾಶ ನಿಲ್ದಾಣದಿಂದ ಭೂಮಿಗೆ ಮರಳಿದ್ದಾರೆ. ಆದರೆ ಈ ಹಿಂದಿನ ಬಾರಿ ಬಾಹ್ಯಾಕಾಶದಿಂದ ಭೂಮಿಗೆ ಮರಳಲು 28 ಗಂಟೆಗಳ ಕಾಲಾವಕಾಶವನ್ನು ತಗೆದುಕೊಳ್ಳಲಾಗಿತ್ತು.