Job Description: * ಇದೀಗ ಇಸ್ರೇಲ್ ದೇಶವು ಲೇಸರ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಮಾಹಿತಿಯನ್ನು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಕ್ಷಿಪಣಿ ರಕ್ಷಣಾ ವ್ಯವಸ್ಥೆ 'ಐರನ್ ಬೀಮ್'ನ (Iron Beam) ಯಶಸ್ವಿ ಪರೀಕ್ಷೆಯ ವೀಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. * ಇಸ್ರೇಲ್ ರಕ್ಷಣಾ ವ್ಯವಸ್ಥೆಯು ಲೇಸರ್ ಕಿರಣವನ್ನು ಬಳಸಿ ಮಾನವರಹಿತ ವಿಮಾನಗಳು, ರಾಕೆಟ್‌ಗಳು ಹಾಗೂ ಮೋರ್ಟಾರ್‌ಗಳನ್ನು ಒಂದೇ ಹೊಡೆತದಲ್ಲಿ ಅತ್ಯಂತ ಕಡಿಮೆ ಸಮಯ ಹಾಗೂ ವೆಚ್ಚದಲ್ಲಿ ನಾಶಪಡಿಸಿದೆ ಎಂದು ಇಸ್ರೇಲ್ ಪ್ರಧಾನಿ ಮಾಹಿತಿ ನೀಡಿದ್ದಾರೆ. * 'ಇಸ್ರೇಲ್ ಹೊಸ 'ಐರನ್ ಬೀಮ್' ಲೇಸರ್ ರಕ್ಷಣಾ ವ್ಯವಸ್ಥೆಯನ್ನು ಮಾನವರಹಿತ ವಿಮಾನಗಳ ಮೇಲೆ ದಾಳಿ ಮಾಡಲು ಬಳಕೆ ಮಾಡುವ ವಿಶ್ವದ ಮೊದಲ ಶಕ್ತಿ ಆಧಾರಿತ ಶಸ್ತ್ರಾಸ್ತ್ರ ವ್ಯವಸ್ಥೆಯಾಗಿದೆ. ಈ ಕ್ಷಿಪಣಿಯನ್ನು ಇಸ್ರೇಲ್‌ನ ಸರ್ಕಾರಿ ರಕ್ಷಣಾ ಸಂಸ್ಥೆ ರಾಫೆಲ್ ಅಡ್ವಾನ್ಸ್ಡ್ ಸಿಸ್ಟಮ್ಸ್ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ. * ಈ ಕ್ಷಿಪಣಿಯ ಕಳೆದ ವರ್ಷ ನಡೆಸಿದ ಪರೀಕ್ಷೆಯಲ್ಲಿ ರಕ್ಷಣಾ ವ್ಯವಸ್ಥೆಯು ಡ್ರೋನ್'ನ್ನು ಹೊಡೆದುರುಳಿಸಿತು. ಇದೀಗ ರಕ್ಷಣಾ ಸಚಿವಾಲಯವು 2024 ರ ವೇಳೆಗೆ ಈ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ನಿಯೋಜಿಸಲಾಗುತ್ತದೆ ಎಂದಿದ್ದಾರೆ. * ಕಳೆದ ವರ್ಷ 11 ದಿನಗಳ ಇಸ್ರೇಲ್-ಗಾಜಾ ಯುದ್ಧದಲ್ಲಿ, ಗಾಜಾದ ಆಡಳಿತಾರೂಢ ಹಮಾಸ್ ಭಯೋತ್ಪಾದಕ ಗುಂಪುಗಳು ಇಸ್ರೇಲ್ ಮೇಲೆ 4,000 ಕ್ಕೂ ಅಧಿಕ ರಾಕೆಟ್‌ಗಳನ್ನು ಹಾರಿಸಿತ್ತು.