Job Description: * ಪ್ರಸ್ತುತ ರಷ್ಯಾ ದೇಶವು ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧ ಸನ್ನಿವೇಶದ ಹೊರತಾಗಿಯೂ ರಷ್ಯಾ ದೇಶವು ತನ್ನ ಪ್ರಬಲ ಅಸ್ತ್ರವಾಗಿರುವ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಹೊಸ ಬ್ಯಾಚ್ ನ್ನು ಭಾರತಕ್ಕೆ ಪೂರೈಕೆ ಮಾಡಿದೆ. ಈ ಬಗ್ಗೆ ಮಾಹಿತಿಯನ್ನು ರಷ್ಯಾದ ಸರ್ಕಾರಿ ನಿಯಂತ್ರಣದ ಸುದ್ದಿಯು ವರದಿ ಮಾಡಿದೆ. * ರಷ್ಯಾದ ಈ 'ಎಸ್‌-400' ಕ್ಷಿಪಣಿಗಳ ವ್ಯವಸ್ಥೆಯ ಹೊಸ ಬ್ಯಾಚ್‌ ಹಡಗಿನ ಮೂಲಕ ಭಾರತಕ್ಕೆ ಆಗಮಿಸಿದೆ. ಕ್ಷಿಪಣಿ ವ್ಯವಸ್ಥೆಯ ಬಿಡಿ ಭಾಗಗಳನ್ನು ವಾಯು ಹಾಗು ಸಮುದ್ರ ಮಾರ್ಗಗಳ ಮೂಲಕ ರಷ್ಯಾ ಭಾರತಕ್ಕೆ ರವಾನಿಸಿದೆ. ಭಾರತ ಯಾವುದೇ ಸಮಸ್ಯೆ ಹಾಗೂ ವಿಳಂಬವಿಲ್ಲದೆ ಎಸ್‌-400 ಕ್ಷಿಪಣಿ ವ್ಯವಸ್ಥೆಯ ಹೊಸ ಬ್ಯಾಚ್‌'ನ್ನು ಸ್ವೀಕರಿಸಿದೆ ಎಂದು ಹೇಳಲಾಗಿದೆ. * ಈ ಹಿಂದೆ 2015 ರಲ್ಲಿ ಭಾರತವು ರಷ್ಯಾದಿಂದ ಎಸ್‌-400 ಕ್ಷಿಪಣಿ ವಾಯು ರಕ್ಷಣಾ ವ್ಯವಸ್ಥೆ ಖರೀದಿಸುವುದಾಗಿ ವರದಿ ಮಾಡಿತ್ತು. ನಂತರದ ದಿನಗಳಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು 2018 ರ ಅಕ್ಟೋಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ '05' ಎಸ್‌-400 ರೆಜಿಮೆಂಟ್‌ ಕಿಟ್‌ಗಳನ್ನು ಭಾರತಕ್ಕೆ ಪೂರೈಕೆ ಮಾಡುವ ಸುಮಾರು 5.43 ಶತಕೋಟಿ ಡಾಲರ್‌ ಮೊತ್ತದ ಯೋಜನೆಗೆ ಒಪ್ಪಂದವಾಗಿತ್ತು, ಈ ಒಪ್ಪಂದಕ್ಕೆ ಉಭಯರಾಷ್ಟ್ರಗಳು ಒಪ್ಪಿಗೆ ನೀಡಿ ಸಹಿ ಹಾಕಿದ್ದವು. * S-400 ನ್ನು ಹಿಂದೆ S-300 PMU-3 ಎಂದು ಕರೆಯಲಾಗುತ್ತಿತ್ತು, ಇದು ಮೊಬೈಲ್, ಮೇಲ್ಮೈಯಿಂದ -ಏರ್ ಮಿಸೈಲ್ (SAM) ವ್ಯವಸ್ಥೆಯನ್ನು 1990 ರ ದಶಕದಲ್ಲಿ ರಷ್ಯಾದ ಅಲ್ಮಾಜ್ ಸೆಂಟ್ರಲ್ ಡಿಸೈನ್ ಬ್ಯೂರೋ ಸಾಗರ ಎಂಜಿನಿಯರಿಂಗ್‌ಗಾಗಿ S-300 ಕುಟುಂಬಕ್ಕೆ ಅಪ್‌ಗ್ರೇಡ್ ಮಾಡಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿತು. S-400 ಸಿಸ್ಟಮ್‌ನ ವಿಕಸನಗೊಂಡ ಆವೃತ್ತಿಯು S-500 ಪ್ರಮೀತಿಯಸ್ ಆಗಿದೆ, ಇದು 2021 ರ ಸೆಪ್ಟೆಂಬರ್.16 ರಂದು ಸೇವೆಗೆ ಸೇರಿದೆ. * S-400 ಈ ಹಿಂದೆ 2007 ರ ಏಪ್ರಿಲ್. 28 ರಂದು ಸೇವೆಗೆ ಸೇರಿದೆ. ಹೊಸ ಮೇಲ್ಮೈಯಿಂದ ಗಾಳಿಗೆ ಕ್ಷಿಪಣಿ ವ್ಯವಸ್ಥೆಗಳ ಮೊದಲ ಬೆಟಾಲಿಯನ್ ಆಗಸ್ಟ್ 6 ರಂದು ಯುದ್ಧ ಕರ್ತವ್ಯವನ್ನು ವಹಿಸಿಕೊಂಡಿದೆ.