Job Description: * ದೇಶದೆಲ್ಲೆಡೆ ರಾಮನ ಭಕ್ತ ಹನುಮನ ಜಯಂತಿಯನ್ನು ಆಚಾಹರಿಸಲಾಗಿದೆ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ ರಾಜ್ಯದಲ್ಲಿನ ಮೊರ್ಬಿಯಲ್ಲಿ ನಿರ್ಮಾಣ ಮಾಡಲಾಗಿರುವ 108 ಅಡಿ ಹನುಮಾನ್ ಪ್ರತಿಮೆಯನ್ನು ವರ್ಚುವಲ್ ಸಭೆಯ ಮೂಲಕ ಅನಾವರಣಗೊಳಿಸಿದ್ದಾರೆ. * ಈ ಪ್ರತಿಮೆಯು 'ಹನುಮಂಜಿ ಚಾರ್ ಧಾಮ್' ಯೋಜನೆಯ ಭಾಗವಾಗಿ ದೇಶಾದ್ಯಂತ ನಾಲ್ಕು ದಿಕ್ಕುಗಳಲ್ಲಿ ನಿರ್ಮಿಸಲಾಗುತ್ತಿರುವ ನಾಲ್ಕು ಪ್ರತಿಮೆಗಳಲ್ಲಿ 2 ನೇ ಪ್ರತಿಮೆ ಇದಾಗಿದೆ ಎಂದು ಪ್ರಧಾನಿ ಕಾರ್ಯಾಲಯ ಪ್ರಕಟಣೆಯಲ್ಲಿ ಮಾಹಿತಿಯನ್ನು ಬಹಿರಂಗ ಪಡಿಸಿದೆ. * 'ಹನುಮಂಜಿ ಚಾರ್ ಧಾಮ್' ಯೋಜನೆಯ ಸರಣಿಯ ಮೊದಲ ಪ್ರತಿಮೆಯನ್ನು ಉತ್ತರದಲ್ಲಿನ ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಈ ಹಿಂದೆ 2010 ರಲ್ಲಿ ಸ್ಥಾಪನೆ ಮಾಡಲಾಗಿದೆ. 2 ನೇ ಪ್ರತಿಮೆಯನ್ನು ಗುಜರಾತ ರಾಜ್ಯದಲ್ಲಿನ ಮೊರ್ಬಿನಲ್ಲಿದೆ. 3 ನೇ ಪ್ರತಿಮೆಯ ಕೆಲಸವನ್ನು ದಕ್ಷಿಣದಲ್ಲಿ ರಾಮೇಶ್ವರಂನಲ್ಲಿ ಪ್ರಾರಂಭಿಸಲಾಗಿದೆ ಎಂದು ವರದಿ ಮಾಡಲಾಗಿದೆ.