Job Description: * ಗ್ರಾಮೀಣ ಜನರಿಗೆ ಆರೋಗ್ಯ ರಕ್ಷಣೆಯನ್ನು ಕಲ್ಪಿಸಲು, ಹಾಗೂ ಉತ್ತಮ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಯೋಜನೆಯೇ 'ಇ-ಸಂಜೀವಿನಿ' ಟೆಲಿ ಮೆಡಿಸಿನ್ ಸೇವೆ. ಈ ಯೋಜನೆಯ ಮೂಲಕ ರಾಜ್ಯದ ಗ್ರಾಮೀಣ ಜನರಿಗೆ ಆರೋಗ್ಯ ಸೇವೆಯನ್ನು ನೀಡುವಲ್ಲಿ ಹೊಸ ದಾಖಲೆಯನ್ನು ಬರೆದಿದೆ. * ಈ ಹಿನ್ನಲೆಯಿಂದಾಗಿ ದೇಶದಲ್ಲಿಯೇ 'ಇ-ಸಂಜೀವನಿ' ಟೆಲಿ ಮೆಡಿಸಿನ್ ಸೇವೆಯಲ್ಲಿ ಕರ್ನಾಟಕ ರಾಜ್ಯಕ್ಕೆ 3 ನೇ ಸ್ಥಾನ ಲಭಿಸಿದೆ. ಈ ಮಾಹಿತಿಯನ್ನು ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಯೋಜನೆಯ ಮೂಲಕ ಅತಿ ಹೆಚ್ಚು ಟೆಲಿಕಾನ್ಸಲ್ಟೇಶನ್ ನಡೆಸುವಲ್ಲಿ ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯಕ್ಕೆ 3 ನೇ ಸ್ಥಾನ ಲಭಿಸಿದೆ. * ಪ್ರಸ್ತುತ ಇ-ಸಂಜೀವಿನಿ ಮೂಲಕ, ಟೆಲಿ ಮೆಡಿಸಿನ್ ಸೇವೆಯ ಮೂಲಕ ಗ್ರಾಮೀಣ ಜನತೆಗೆ ಉತ್ತಮ ವೈದ್ಯಕೀಯ ಸೇವೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನು ಇಟ್ಟಿದೆ. * ಈ 'ಇ-ಸಂಜೀವಿನಿ' ಟೆಲಿ ಮೆಡಿಸಿನ್ ಸೇವೆಯು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ಈ ಸೇವೆಯ ದೇಶಾದ್ಯಂತ 1 ಲಕ್ಷ ಆಯುಷ್ಮಾನ್ ಭಾರತ್ ಆರೋಗ್ಯ ಹಾಗೂ ಅಭ್ಯುದಯ ಕೇಂದ್ರಗಳಿಗೆ ವಿಸ್ತರಣೆ ಮಾಡಲಾಗುತ್ತಿದೆ, ಇದರಿಂದಾಗಿ ರೋಗಿಗಳಿಗೆ ಕೂಡ, ಉತ್ತಮ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗಿದೆ ಎಂದಿದ್ದಾರೆ. * ಮೊಟ್ಟ ಮೊದಲು ಗ್ರಾಮೀಣ ಜನರು ತಮ್ಮ ಮೊಬೈಲ್, ಕಂಪ್ಯೂಟರ್ ಬಳಸಿಕೊಂಡು 'ಇ-ಸಂಜೀವಿನಿ'ಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು, ನಂತರ ದೇಶದಲ್ಲಿನ ಯಾವುದೇ ವೈದ್ಯರ ಜೊತೆ ನೇರ ಸಮಾಲೋಚನೆ ನಡೆಸಿ, ತಮ್ಮ ರೋಗಗಳಿಗೆ ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳಬಹುದಾಗಿದೆ. * ಕೇಂದ್ರ ಸರ್ಕಾರವು ಈ ಹಿಂದೆ 2019 ರಲ್ಲಿ 'ಇ-ಸಂಜೀವಿನಿ' ಟೆಲಿ ಮೆಡಿಸಿನ್ ಸೇವೆಯನ್ನು ಆರಂಭಿಸಿದೆ. ಇದೀಗ ಈ ಸೇವೆಯ ಅಡಿಯಲ್ಲಿ ಪ್ರತಿ ನಿತ್ಯವು 40 ಸಾವಿರಕ್ಕೂ ಅಧಿಕ ರೋಗಿಗಳು ವೈದ್ಯಕೀಯ ಸೇವೆಯನ್ನು ಪಡೆದುಕೊಳ್ಳುತ್ತಿದ್ದಾರೆ.