Job Description: * ಪ್ರಸ್ತುತ ಉಕ್ರೇನ್ ದೇಶವು ಯುರೋಪಿಯನ್ ಒಕ್ಕೂಟಕ್ಕೆ ಸೇರಲು ಇದೀಗ ಅಧಿಕೃತ ಅರ್ಜಿ ನಮೂನೆಯನ್ನು ಭರ್ತಿ ಮಾಡಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ತಿಳಿಸಿದ್ದಾರೆ. ಪ್ರಸ್ತುತ ಯುರೋಪಿಯನ್ ಆಯೋಗದ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ ಅವರು ಕೂಡ ಈ ಬಗ್ಗೆ ತಿಳಿಸಿದ್ದಾರೆ. * EU ಸದಸ್ಯತ್ವಕ್ಕಾಗಿ ಅಭ್ಯರ್ಥಿಯಾಗಲು ನಮ್ಮ ದೇಶವನ್ನು ಸಿದ್ಧಪಡಿಸುವಲ್ಲಿ ಇದೊಂದು ಮಹತ್ವದ ಹಂತವಾಗಿದೆ. ಸೇರ್ಪಡೆಯ ಬಹುತೇಕ ಕೆಲಸವೂ ಪೂರ್ಣಗೊಂಡಿದೆ ಅತೀ ಶೀಘ್ರದಲ್ಲೇ ಉಕ್ರೇನ್ ದೇಶವು ಯುರೋಪಿಯನ್ ಒಕ್ಕೂಟದ ಪ್ರತಿನಿಧಿಗಳಿಗೆ ಉತ್ತರಗಳನ್ನು ನೀಡಲಿದೆ ಎಂದಿದ್ದಾರೆ. * ಈ ಹಿಂದೆ 2022 ರ ಫೆಬ್ರವರಿ 24 ರಂದು ರಷ್ಯಾ ದೇಶವು ಉಕ್ರೇನ್ ಮೇಲೆ ಯುದ್ಧವನ್ನು ಆರಂಭಿಸಿದೆ. ಹಾಗೆಯೇ ದೇಶದ ಪೂರ್ವದಲ್ಲಿರುವ ನಗರಗಳ ಮೇಲೆ ರಷ್ಯಾದ ವಾಯುದಾಳಿಗಳಲ್ಲಿ ಒಟ್ಟು 2,500 ರಿಂದ 3,000 ಉಕ್ರೇನಿಯನ್ ಸೈನಿಕರು ಹಾಗೂ ಸುಮಾರು 10,000 ಜನರು ಸಂಘರ್ಷದಲ್ಲಿ ಮೃತಪಟ್ಟಿದ್ದಾರೆ ಹಾಗೂ ಇನ್ನು ಅನೇಕರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ವರದಿ ಮಾಡಿದ್ದಾರೆ. * ಇದರ ಮಾಡುವೆ ಉಕ್ರೇನಿಯನ್ ಕ್ಷಿಪಣಿ ದಾಳಿಯಿಂದಾಗಿ ರಷ್ಯಾದ ಯುದ್ಧನೌಕೆ ಮೊಸ್ಕ್ವಾ ನಾಶವಾಗಿದೆ ಎಂದು ಉಕ್ರೇನಿನ ಹಿರಿಯ ರಕ್ಷಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಸುದ್ದಿವಾಹಿನಿ ಮಾಹಿತಿ ನೀಡಿದೆ.