Job Description: * ಸಮಿಯಾ ಸುಲುಹು ಹಸನ್ ಅವರು ತಾಂಜಾನಿಯಾದ ರಾಜಕಾರಣಿಯಾಗಿದ್ದಾರೆ. ಪ್ರಸ್ತುತ ಇವರು ದೇಶವನ್ನು ಆಳುತ್ತಿರುವ ಚಾಮಾ ಚಾ ಮಾಪಿಂಡುಜಿ (CCM) ಪಕ್ಷದ ಸದಸ್ಯರಾಗಿದ್ದಾರೆ. ಇದೀಗ ಇವರು ತಾಂಜಾನಿಯಾದ ಮೊದಲ ಮಹಿಳಾ ಅಧ್ಯಕ್ಷರಾಗಿದ್ದಾರೆ. * ಇದೀಗ ಅವರು ಪೂರ್ವ ಆಫ್ರಿಕಾದ ಸಮುದಾಯದಲ್ಲಿ ದೇಶದ 3 ನೇ ಮಹಿಳಾ ಸರ್ಕಾರದ ಮುಖ್ಯಸ್ಥರಾಗಿದ್ದಾರೆ. ಸರ್ಕಾರದ ಇತರ ಇಬ್ಬರು ಮಹಿಳಾ ಮುಖ್ಯಸ್ಥರು ರುವಾಂಡಾದಲ್ಲಿ ಅಗಾಥೆ ಉವಿಲಿಂಗಿಯಿಮಾನಾ ಹಾಗೂ ಬುರುಂಡಿಯಲ್ಲಿ ಸಿಲ್ವಿ ಕಿನಿಗಿ. * ಈ ಹಿಂದೆ 2021 ರ ಮಾರ್ಚ್. 17 ರಂದು ತಾಂಜಾನಿಯಾದ ಅಧ್ಯಕ್ಷ ಜಾನ್ ಮಗುಫುಲಿ ಅವರ ನಿಧನದ ನಂತರ ಇವರು 2021 ರ ಮಾರ್ಚ್. 19 ರಂದು ಅಧಿಕಾರ ವಹಿಸಿಕೊಂಡರು. * ಈ ಮೊದಲು 2000 ರಲ್ಲಿ ಇವರು ಸಾರ್ವಜನಿಕ ಕಚೇರಿಗೆ ಸ್ಪರ್ಧಿಸಲು ನಿರ್ಧರಿಸಿದ್ದರುಹಾಗೂ ಜಂಜಿಬಾರ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಸದಸ್ಯರಾಗಿ ಆಯ್ಕೆಯಾದರು ಹಾಗೂ ಅಧ್ಯಕ್ಷ ಅಮಾನಿ ಕರುಮೆ ಅವರನ್ನು ಮಂತ್ರಿಯಾಗಿ ನೆನಕ ಮಾಡಿದರು. ಆ ಸಂಧರ್ಭದಲ್ಲಿ ಇವರು ಏಕೈಕ ಉನ್ನತ ಶ್ರೇಣಿಯ ಮಹಿಳಾ ಸಚಿವರಾಗಿದ್ದರು. ಮತ್ತೇ 2005 ರಲ್ಲಿ ಅವರು ಮರು-ಚುನಾಯಿತರಾದರು ಹಾಗೂ ಕ್ಯಾಬಿನೆಟ್‌ನ ಮತ್ತೊಂದು ಪೋರ್ಟ್‌ಫೋಲಿಯೊದಲ್ಲಿ ಸಚಿವರಾಗಿ ಮರು ನೇಮಕವಾದರು. 2010 ರಲ್ಲಿ, ಅವರು ರಾಷ್ಟ್ರೀಯ ಅಸೆಂಬ್ಲಿಗೆ ಚುನಾವಣೆಯಲ್ಲಿ ಸ್ಪರ್ಧಿಸಿ ಸುಮಾರು 80 ಪ್ರತಿಶತ ಮತಗಳಿಂದ ಜಯಗಳಿಸಿದರು. ಆ ಸಮಯದಲ್ಲಿ ಇವರು ಅಧ್ಯಕ್ಷ ಜಕಯಾ ಕಿಕ್ವೆಟೆ ಅವರು ಕೇಂದ್ರ ವ್ಯವಹಾರಗಳ ರಾಜ್ಯ ಸಚಿವರಾಗಿ ನೇಮಕಗೊಂಡರು. ಹಾಗೆಯೇ 2014 ರಲ್ಲಿ, ಅವರು ಸಾಂವಿಧಾನಿಕ ಅಸೆಂಬ್ಲಿಯ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ತಾಂಜಾನಿಯಾದ ಹೊಸ ಸಂವಿಧಾನವನ್ನು ರಚಿಸುವ ಕಾರ್ಯವನ್ನು ನಿರ್ವಹಿಸಿದರು. ಇವರು 2015 ರ ನವೆಂಬರ್. 05 ರಂದು, ಮಗುಫುಲಿಯ ನಂತರ ಇವರು ದೇಶದ ಮೊದಲ ಮಹಿಳಾ ಉಪಾಧ್ಯಕ್ಷರಾದರು. 2020 ರಲ್ಲಿ, ಅವರಿಬ್ಬರೂ 2ನೇ ಬಾರಿಗೆ '05' ವರ್ಷಗಳ ಅವಧಿಗೆ ಮರು ಆಯ್ಕೆಯಾದರು. * ತಾಂಜಾನಿಯಾದ ದೇಶದ ರಾಷ್ಟ್ರಪತಿ ಮಗುಫುಲಿಯ ಮರಣದ ನಂತರ, 2021 ರ ಮಾರ್ಚ್. 19 ರಂದು ಸಮಿಯಾ ಸುಲುಹು ಹಸನ್ ಅವರು ಉತ್ತರಾಧಿಕಾರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದೀಗ ಇವರು ಮಗುಫುಲಿಯ 2ನೇ '05' ವರ್ಷಗಳ ಅವಧಿಗೆ ಸೇವೆ ಸಲ್ಲಿಸಲಿದ್ದಾರೆ. * ಇದೀಗ ಇವರು ಅಧಿಕಾರ ವಹಿಸಿಕೊಂಡ ನಂತರ ಇಥಿಯೋಪಿಯಾದ ಸಹ್ಲೆ-ವರ್ಕ್ ಝೆವ್ಡೆ ಅವರೊಂದಿಗೆ ಆಫ್ರಿಕಾದಲ್ಲಿ ರಾಜ್ಯದ ಇಬ್ಬರು ಮಹಿಳಾ ಸರ್ಕಾರದ ಮುಖ್ಯಸ್ಥರಲ್ಲಿ ಇವರು ಒಬ್ಬರಾದರು. ಇವರು COVID-19 ಸಾಂಕ್ರಾಮಿಕ ರೋಗದ ಸಂಧರ್ಭದಲ್ಲಿ ಶಾಲೆಗಳಲ್ಲಿ ಗರ್ಭಿಣಿ ಹುಡುಗಿಯರ ಮೇಲಿನ ನಿಷೇಧವನ್ನು ತೆಗೆದುಹಾಕಿದೆ.