Job Description: * ಪ್ರಸ್ತುತ ರಷ್ಯಾ-ಉಕ್ರೇನ್ ಯುದ್ಧದ ನಡುವೆ ಭಾರತದ ಬಲವಾದ ಸ್ವತಂತ್ರ ನಿಲುವನ್ನು ತೋರಿದೆ, ಹಾಗೆಯೇ ಜಾಗತಿಕ ಒತ್ತಡವಿಲ್ಲದೇ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ನೀಡಲು ಅವಕಾಶ ಕಲ್ಪಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. * ಈ ರಷ್ಯಾ-ಉಕ್ರೇನ್ ಯುದ್ಧವು ಇಡೀ ಜಗತ್ತನ್ನೇ ಎರಡು ಶಿಬಿರಗಳಾಗಿ ವಿಂಗಡಿಸಿದೆ ಈ ಸಮಯದಲ್ಲಿ ಭಾರತವು ಮಾನವೀಯತೆಯ ಸ್ವತಂತ್ರ ನಿಲುವನ್ನು ತೋರಿದೆ. ಇದೀಗ ಭಾರತವು ತನ್ನ ರಾಷ್ಟ್ರೀಯ ಹಿತಾಸಕ್ತಿಗಳನ್ನು ಎತ್ತಿ ತೋರಿಸಿದೆ. * ಭಾರತದ 75 ನೇ ಸ್ವಾತಂತ್ರ್ಯದ ಅಮೃತವಾಗಿದೆ, ಇದೀಗ ಬಿಜೆಪಿ ತನ್ನ 'ಏಕ್ ಭಾರತ್, ಶ್ರೇಷ್ಠ ಭಾರತ' ಕೆಲಸ ಮಾಡುತ್ತಿದೆ. ಹಾಗೆಯೇ ಧ್ಯೇಯವಾಕ್ಯವನ್ನು ಬಲಪಡಿಸಿಕೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ. * ಇತ್ತೀಚಿಗೆ ಭಾರತವು 400 ಬಿಲಿಯನ್ US ಡಾಲರ್ ರಫ್ತು ಗುರಿಯನ್ನ ತಲುಪಿದೆ, ಸಾಂಕ್ರಾಮಿಕ ರೋಗದ ನಡುವೆ ಭಾರತದ ಉನ್ನತ ಸಾಮರ್ಥ್ಯವನ್ನು ತೋರಿದೆ. ಪ್ರಸ್ತುತ ಭಾರತದ 80 ಕೋಟಿ ಬಡ ವರ್ಗದ ಜನರಿಗೆ ಉಚಿತ ಪಡಿತರ(ಆಹಾರ)ವನ್ನು ನೀಡುತ್ತಿದೆ. ಇದಕ್ಕಾಗಿ ಕೇಂದ್ರವು ಸುಮಾರು 3.5 ಲಕ್ಷ ಕೋಟಿಗಳನ್ನು ಖರ್ಚು ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಈ ಹಿನ್ನಲೆಯಿಂದಾಗಿ ಬಿಜೆಪಿ ಸರ್ಕಾರವು 'ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್' ಮಂತ್ರವನ್ನು ಪಾಲಿಸುತ್ತಿದೆ.