Job Description: * ಪ್ರಸ್ತುತ ಗುಜರಾತ್‌ ನ ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಯೋಜನೆಗಾಗಿ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (AIIB) ಹಾಗೂ ವಿಶ್ವ ಬ್ಯಾಂಕ್ 7,500 ಕೋಟಿ ರೂಪಾಯಿ ಸಾಲವನ್ನು ನೀಡಲಿವೆ. * ಇತ್ತೀಚಿಗೆ ವಿಶ್ವಬ್ಯಾಂಕ್ ನಿಯೋಗವು ಗಾಂಧಿನಗರಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲು ಹಾಗೂ ಸ್ಕೂಲ್ ಆಫ್ ಎಕ್ಸಲೆನ್ಸ್ ಯೋಜನೆಯ ಬಗ್ಗೆ ಅಧ್ಯಯನವನ್ನು ಕೈಗೊಂಡಿದೆ. ಪ್ರಸ್ತುತ ಬ್ಯಾಂಕಿನ ಜಾಗತಿಕ ಶಿಕ್ಷಣ ನಿರ್ದೇಶಕರಾದ ಜೈಮ್ ಸಾವೇದ್ರಾ ಅವರು ಈ ನಿಯೋಗವನ್ನು ನೇತೃತ್ವ ವಹಿಸಿದ್ದರು. ಅಷ್ಟೇ ಅಲ್ಲದೇ ರಾಜ್ಯದ ಶಿಕ್ಷಣ ಇಲಾಖೆಯ ಕಮಾಂಡ್ ಹಾಗೂ ಕಂಟ್ರೋಲ್ ಕೇಂದ್ರಕ್ಕೂ ನಿಯೋಗ ಭೇಟಿಯನ್ನು ನೀಡಿತ್ತು. * ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ನ್ನು ಇತ್ತೀಚೆಗೆ ಆರಂಭಿಸಲಾಗಿದೆ ಹಾಗೂ ಇದು ಸಂವಾದಾತ್ಮಕ ವೇದಿಕೆಯಾಗಿದೆ, ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಹಾಜರಾತಿಗಳ ಬಗ್ಗೆ ಮೇಲ್ವಿಚಾರಣೆ ಮಾಡಲು ರಾಜ್ಯದ ಶಿಕ್ಷಣ ಇಲಾಖೆಯು ಇದನ್ನು ಬಳಕೆ ಮಾಡುತ್ತಿದೆ. ಪ್ರಸ್ತುತ ಈ ಕೇಂದ್ರದ ಮೂಲಕ ಶಾಲೆಗಳಿಗೆ ಇ-ಲರ್ನಿಂಗ್ ಯೋಜನೆಗಳನ್ನೂ ನೀಡಲಾಗುತ್ತಿದೆ. * ಮಿಷನ್ ಸ್ಕೂಲ್ ಆಫ್ ಎಕ್ಸಲೆನ್ಸ್ ಈ ಯೋಜನೆಯು ರಾಜ್ಯದಲ್ಲಿನ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿಯನ್ನು ಒಳಗೊಂಡಿದೆ. ಈ ಮಿಷನ್ ಅಡಿಯಲ್ಲಿ, ಗುಜರಾತ್ ರಾಜ್ಯ ಸರ್ಕಾರವು ಮುಂದಿನ '05' ವರ್ಷಗಳಲ್ಲಿ ಸುಮಾರು 10,000 ಕೋಟಿ ರೂ. ರಾಜ್ಯದ ಎಲ್ಲಾ 5,847 ಅನುದಾನಿತ ಮತ್ತು 35,133 ಸರ್ಕಾರಿ ಶಾಲೆಗಳು ಈ ಮಿಷನ್ ಅಡಿಯಲ್ಲಿ ಬರಲಿವೆ. ಅಷ್ಟೇ ಅಲ್ಲದೇ, ದ್ವಿಭಾಷಾ ಬೋಧನಾ ವಿಧಾನಕ್ಕೆ ಪ್ರಾಮುಖ್ಯತೆಯನ್ನು ಕಲ್ಪಿಸಲಾಗುತ್ತದೆ. * ಈ ಯೋಜನೆಗಾಗಿ ಸ್ವೀಕರಿಸಿದ ನಿಧಿಯನ್ನು 1,50,000 ಲಕ್ಷ ಸ್ಮಾರ್ಟ್ ತರಗತಿಗಳನ್ನು ರಚಿಸಲು ಹಾಗೂ ಗುಜರಾತ್‌ ರಾಜ್ಯಾದ್ಯಂತ ಸರಿ ಸುಮಾರು 41,000 ಅನುದಾನಿತ ಹಾಗೂ ಸರ್ಕಾರಿ ಶಾಲೆಗಳಲ್ಲಿ 20,000 ಹೊಸ ಕಂಪ್ಯೂಟರ್ ಲ್ಯಾಬ್‌ಗಳು, 50,000 ಹೊಸ ತರಗತಿ ಕೊಠಡಿಗಳು ಮತ್ತು 5,000 ಟಿಂಕರಿಂಗ್ ಲ್ಯಾಬ್‌ಗಳನ್ನು ನಿರ್ಮಾಣ ಮಾಡಲು ಖರ್ಚು ಮಾಡಲಾಗುತ್ತದೆ. ಈ ಯೋಜನೆಯು ಮುಂದಿನ '05' ವರ್ಷಗಳಲ್ಲಿ ಸರಿ ಸುಮಾರು ಒಂದು ಕೋಟಿ ಶಾಲಾ ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.