Job Description: * ಇತ್ತೀಚಿಗೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್‌ (BPCL) 20 ಲಕ್ಷ ಯೂರಲ್ಸ್ ಕಚ್ಚಾ ತೈಲವನ್ನು ರಷ್ಯಾದಿಂದ ಖರೀದಿಸಿದೆ. ಈ ಕಚ್ಚಾ ತೈಲವು ಮೇ ತಿಂಗಳಲ್ಲಿ ಸಾಗಣೆಯಾಗಲಿದೆ ಎಂದಿದ್ದಾರೆ. * ಪ್ರಸ್ತುತ ರಷ್ಯಾ ಸೇನೆಯು ಉಕ್ರೇನ್ ಮೇಲೆ ದಾಳಿ ನಡೆಸಿದ ನಂತರ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾ ದೇಶದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸುತ್ತಿವೆ. ಆದರೆ ಪಶ್ಚಿಮದ ಕೆಲ ದೇಶಗಳು ರಷ್ಯಾ ದೇಶದಿಂದ ತೈಲ ಖರೀದಿ ನಿಲ್ಲಿಸಿವೆ. * BPCL ಕಂಪನಿಯು ರಷ್ಯಾದ ಯೂರಲ್ಸ್ ಕಚ್ಚಾ ತೈಲದ ಕಾಯಂ ಗ್ರಾಹಕವಾಗಿದೆ. ಭಾರತವು ಫೆಬ್ರುವರಿ 24 ರ ನಂತರ ರಷ್ಯಾದಿಂದ ಒಟ್ಟಾರೆಯಾಗಿ ಸುಮಾರು 1.60 ಕೋಟಿ ಬ್ಯಾರೆಲ್ ತೈಲ ಖರೀದಿಸಿದಂತಾಗಿದೆ. * ಇದೀಗ ಭಾರತವು ರಷ್ಯಾ ಜೊತೆಗಿನ ಆರ್ಥಿಕ ವ್ಯವಹಾರಗಳನ್ನು ಸ್ಥಿರವಾಗಿಸಲು ಪ್ರಯತ್ನ ಪಡುತ್ತಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಹೇಳಿಕೆ ನೀಡಿದ್ದಾರೆ. * ಭಾರತ ದೇಶದ ಎರಡು ತೈಲ ಸಂಸ್ಕರಣಾ ಕಂಪನಿಗಳು ಮೇ. ತಿಂಗಳಲ್ಲಿ ಸೌದಿ ಅರೇಬಿಯಾದಿಂದ ಕಡಿಮೆ ಪ್ರಮಾಣದಲ್ಲಿ ಕಚ್ಚಾ ತೈಲ ಖರೀದಿಸುವ ಯೋಚನೆಯಲ್ಲಿವೆ ಎಂದು ತಿಳಿಸಲಾಗಿದೆ, ಹಾಗೆಯೇ ಹೆಚ್ಚಿನ ತೈಲವನ್ನು ರಷ್ಯಾದಿಂದ ಖರೀದಿಸಲಿದೆ ಎನ್ನಲಾಗಿದೆ. * ಸೌದಿ ಅರೇಬಿಯಾ ಹಾಗೂ ಇರಾಕ್ ದೇಶಗಳು ಭಾರತಕ್ಕೆ ಕಚ್ಚಾ ತೈಲ ಪೂರೈಸುವ ದೇಶಗಳ ಪೈಕಿ ಮೊದಲ ಎರಡು ಸ್ಥಾನಗಳಲ್ಲಿವೆ. * ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) ಭಾರತೀಯ ಸರ್ಕಾರಿ ಸ್ವಾಮ್ಯದ ತೈಲ ಹಾಗೂ ಅನಿಲ ಪರಿಶೋಧಕ & ಉತ್ಪಾದಕವಾಗಿದೆ. ಸಂಸ್ಥೆಯು ಮಹಾರಾಷ್ಟ್ರದ ಮುಂಬೈನಲ್ಲಿ ತನ್ನ ಪ್ರಧಾನ ಕಛೇರಿಯನ್ನು ಹೊಂದಿದೆ. ಹಾಗೂ ಇದು ಭಾರತ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಮಾಲೀಕತ್ವದಲ್ಲಿದೆ. ಈ ಸಂಸ್ಥೆಯು ಕೇರಳದ ಕೊಚ್ಚಿ ಹಾಗೂ ಮುಂಬೈನಲ್ಲಿ ಎರಡು ದೊಡ್ಡ ಸಂಸ್ಕರಣಾಗಾರಗಳನ್ನು ನಿರ್ವಹಿಸುತ್ತದೆ. * ಫೋರ್ಬ್ಸ್‌ನ ಪ್ರಕಾರ 2021 ರ 'ಗ್ಲೋಬಲ್ 2000' ಪಟ್ಟಿಯಲ್ಲಿ 792 ನೇ ಸ್ಥಾನದಲ್ಲಿದೆ.