Job Description: * ಇತ್ತೀಚಿಗೆ 2022 ನೇ ಸಾಲಿನ ಶತಕೋಟ್ಯಾಧಿಪತಿಗಳ ಪಟ್ಟಿಯನ್ನು ಅಮೇರಿಕದ ಪೋರ್ಬರ್ಸ್ ಮ್ಯಾಗಜೀನ್ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ವಿಪ್ರೋ ಸಂಸ್ಥಾಪಕ 'ಅಜೀಂ ಪ್ರೇಮ್ ಜಿ' ಕರ್ನಾಟಕದ ನಂ.1 ಶ್ರೀಮಂತರಾಗಿದ್ದಾರೆ. * ಅಮೇರಿಕದ ಪೋರ್ಬ್ಸ್ ಮ್ಯಾಗಜಿನ್ ಕರ್ನಾಟಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ವಿಪ್ರೋದ 'ಅಜೀಂ ಪ್ರೇಮ್ ಜೀ' ಅವರು 73.5 ಸಾವಿರ ಕೋಟಿ ರೂ ಮೌಲ್ಯದೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಹಾಗೆಯೇ ವಿಶ್ವದ ಪಟ್ಟಿಯಲ್ಲಿ ಪ್ರೇಮ್ ಜಿ ಅವರು 206 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. * ಇನ್ಪೋಸಿಸ್ ನ ನಾರಾಯಣ ಮೂರ್ತಿಯವರು 33 ಸಾವಿರ ಕೋಟಿ ರೂ. ಮೌಲ್ಯದೊಂದಿಗೆ 2 ನೇ ಸ್ಥಾನದಲ್ಲಿದ್ದಾರೆ. * ಅಜೀಂ ಹಾಶಿಮ್ ಪ್ರೇಮ್‌ಜಿ ಅವರೊಬ್ಬ ಭಾರತೀಯ ಉದ್ಯಮಿ, ಹೂಡಿಕೆದಾರ, ಇಂಜಿನಿಯರ್ ಹಾಗೂ ಲೋಕೋಪಕಾರಿಯಾಗಿದ್ದಾರೆ. ಇವರು ವಿಪ್ರೋ ಲಿಮಿಟೆಡ್‌ನ ಅಧ್ಯಕ್ಷರಾಗಿದ್ದರು. ಪ್ರೇಮ್‌ಜಿಯವರು ಮಂಡಳಿಯ ಕಾರ್ಯನಿರ್ವಾಹಕೇತರ ಸದಸ್ಯರಾಗಿ ಹಾಗೂ ಸಂಸ್ಥಾಪಕ ಅಧ್ಯಕ್ಷರಾಗಿ ಉಳಿದಿದ್ದಾರೆ. ಇವರನ್ನು ಭಾರತೀಯ ಐಟಿ(IT) ಉದ್ಯಮದ ಸಾರ್ವಭೌಮ ಎಂದು ಕರೆಯುತ್ತಾರೆ. ಇವರು '04' ದಶಕಗಳ ವೈವಿಧ್ಯೀಕರಣ ಹಾಗೂ ಬೆಳವಣಿಗೆಯ ಮೂಲಕ ವಿಪ್ರೊವನ್ನು ಮಾರ್ಗದರ್ಶನ ಮಾಡುವ ಜವಾಬ್ದಾರಿಯನ್ನು ಹೊಂದಿದ್ದರು. ಇವರು ಈ ಹಿಂದೆ 2010 ರಲ್ಲಿ ಏಷ್ಯಾವೀಕ್‌ನಿಂದ ವಿಶ್ವದ 20 ಅತ್ಯಂತ ಶಕ್ತಿಶಾಲಿ ಪುರುಷರಲ್ಲಿ ಆಯ್ಕೆಯಾದರು. ಹಾಗೆಯೇ ಇವರು 2011 ರಲ್ಲಿ 100 ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳಲ್ಲಿ ಎರಡು ಬಾರಿ ತಮ್ಮ ಸ್ಥಾನವನ್ನು ಅಲಂಕರಿಸಿದ್ದಾರೆ. * 'ಅಜೀಂ ಪ್ರೇಮ್ ಜಿ' ಅವರು ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್‌ನ ಪ್ರಕಾರ 32.8 ಶತಕೋಟಿ ನಿವ್ವಳ ಮೌಲ್ಯವನ್ನು ಹೊಂದಿರುವ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಇವರಾಗಿದ್ದಾರೆ. ಇವರು ಇತ್ತೀಚಿಗೆ 2020 ರ ಎಡೆಲ್ ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.