Job Description: * ಪ್ರತಿ ವರ್ಷವು ಏಪ್ರಿಲ್. 7 ರಂದು ವಿಶ್ವ ಆರೋಗ್ಯ ದಿನವನ್ನು ಆಚರಣೆ ಮಾಡಲಾಗುತ್ತದೆ. ಇದೀಗ ವಿಶ್ವ ಆರೋಗ್ಯ ಸಂಸ್ಥೆ (WHO) ಹಾಗೂ ಇನ್ನಿತರ ಸಂಬಂಧಿತ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಆಚರಣೆ ಮಾಡುವ ಜಾಗತಿಕ ಆರೋಗ್ಯ ಜಾಗೃತಿ ದಿನವಾಗಿದೆ. * WHO ಮೊದಲ ವಿಶ್ವ ಆರೋಗ್ಯ ಸಭೆಯನ್ನು ಈ ಹಿಂದೆ 1948 ರಲ್ಲಿ ನಡೆಸಿದೆ. ನಂತರ 1950 ರಿಂದ ಜಾರಿಗೆ ಬರುವಂತೆ ಪ್ರತಿ ವರ್ಷ ಏಪ್ರಿಲ್. 7 ನ್ನು ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲು ಅಸೆಂಬ್ಲಿ ನಿರ್ಧಾರವನ್ನು ಕೈಗೊಂಡಿದೆ. * ಪ್ರಸ್ತುತ ವಿಶ್ವ ಆರೋಗ್ಯ ದಿನವನ್ನು WHO ಸ್ಥಾಪನೆಯ ಗುರುತಾಗಿ ಆಚರಣೆ ಮಾಡಲಾಗುತ್ತಿದೆ. ಹಾಗೂ ಪ್ರತಿ ವರ್ಷವು ಜಾಗತಿಕ ಆರೋಗ್ಯಕ್ಕೆ ಪ್ರಮುಖವಾದ ವಿಷಯಗಳ ಬಗ್ಗೆ ವಿಶ್ವಾದ್ಯಂತ ಗಮನ ಹರಿಸಲು ಸಂಸ್ಥೆಯು ಇದನೊಂದು ಅವಕಾಶ ಎಂದು ಪರಿಗಣಿಸಲಾಗಿದೆ. WHO ನಿರ್ದಿಷ್ಟ ಥೀಮ್‌ಗೆ ಸಂಬಂಧಪಟ್ಟಿರುವ ದಿನದಂದು ಅಂತರರಾಷ್ಟ್ರೀಯ, ಪ್ರಾದೇಶಿಕ ಹಾಗೂ ಸ್ಥಳೀಯ ಕಾರ್ಯಕ್ರಮಗಳನ್ನು ನಿಯೋಜಿಸುತ್ತದೆ. * ಈ ವಿಶ್ವ ಆರೋಗ್ಯ ದಿನವು ವಿಶ್ವ ಕ್ಷಯರೋಗ ದಿನ, ವಿಶ್ವ ರೋಗನಿರೋಧಕ ವಾರ, ವಿಶ್ವ ಮಲೇರಿಯಾ ದಿನ, ವಿಶ್ವ ತಂಬಾಕು ರಹಿತ ದಿನ, ವಿಶ್ವ ಏಡ್ಸ್ ದಿನ, ವಿಶ್ವ ರಕ್ತದಾನಿಗಳ ದಿನ, ವಿಶ್ವ ಚಾಗಸ್ ರೋಗ ದಿನ, ವಿಶ್ವ ರೋಗಿಯ ಜೊತೆಗೆ WHO ಗೊತ್ತುಪಡಿಸಿರುವ 11 ಅಧಿಕೃತ ಜಾಗತಿಕ ಆರೋಗ್ಯ ಅಭಿಯಾನಗಳಲ್ಲಿ ಈ ದಿನವು ಒಂದು. * ವಿಶ್ವ ಆರೋಗ್ಯ ದಿನದ ಉದ್ದೇಶಗಳು: - ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವದು. - ಸೂಕ್ತ ಕಾಲಕ್ಕೆ ಒದಗಿಸಬೇಕಾಗಿರುವ ಆರೋಗ್ಯ ಸೇವೆಗೆ ಪ್ರಾಮುಖ್ಯತೆ ನೀಡುವುದು. - ಪರಿಸರದ ಸ್ವಚ್ಛತೆ ಹಾಗೂ ರಕ್ಷಣಾ ಕ್ರಮಗಳನ್ನು ಕೈಗೊಳ್ಳುವದು. - ವಿವಿಧ ರೋಗಗಳಿಗೆ ತುತ್ತಾಗುವ ಕಾರಣಗಳು ಮತ್ತು ಅವುಗಳನ್ನು ತಡೆಗಟ್ಟುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ.