Job Description: * ಹೈಪರ್ಸಾನಿಕ್ ಕ್ಷಿಪಣಿ ಹಾಗೂ ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಯಲ್ಲಿ ಸ್ಪರ್ಧಿಗಳಾಗಿರುವ ರಷ್ಯಾ ಹಾಗೂ ಚೀನಾ ಕ್ಷಿಪ್ರವಾಗಿ ಮುಂದೆ ಸಾಗಿದೆ ಈ ಕಾರಣದಿಂದಾಗಿ ಈ ಕ್ಷೇತ್ರದಲ್ಲಿ ಹೊಸ ತ್ರಿಪಕ್ಷೀಯ ಸಹಕಾರ ಸಹಯೋಗಕ್ಕೆ ಚಾಲನೆ ನೀಡುವ ನಿಟ್ಟಿನಲ್ಲಿ ಅಮೆರಿಕ, ಬ್ರಿಟನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಘೋಷಣೆ ಮಾಡಿವೆ. * ಪ್ರಸ್ತುತ ಆಕಸ್ ರಕ್ಷಣಾ ಒಪ್ಪಂದದ ವಿಸ್ತರಣೆಯಾಗಿ ಹೈಪರ್ಸಾನಿಕ್ ಅಸ್ತ್ರ ಅಭಿವೃದ್ಧಿ ಸಹಯೋಗವು ಕಾರ್ಯವನ್ನು ನಿರ್ವಹಿಸಲಿದೆ. ಹೈಪರ್ಸಾನಿಕ್ ಅಸ್ತ್ರ, ಹೈಪರ್ಸಾನಿಕ್ ಅಸ್ತ್ರ ಪ್ರತಿರೋಧಕ ವ್ಯವಸ್ಥೆ, ಇಲೆಕ್ಟ್ರಾನಿಕ್ ಯುದ್ಧಸಾಮರ್ಥ್ಯ ಕ್ಷೇತ್ರವನ್ನು ಉದ್ದೇಶಿಸಿ ನೂತನ ತ್ರಿಪಕ್ಷೀಯ ಸಹಯೋಗ ಪ್ರಾರಂಭವಾಗಲಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್, ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರು ಒಪ್ಪಂದಕ್ಕೆ ಸಹಿ ಹಾಕಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. * ಈ ಹೈಪರ್ಸಾನಿಕ್ ಕ್ಷಿಪಣಿಯಲ್ಲಿ ಪರಮಾಣು ಸಿಡಿತಲೆಯನ್ನೂ ಜೋಡಿಸ ಬಹುದಾಗಿದೆ. ಹೈಪರ್ಸಾನಿಕ್ ಹಾಗೂ ಸಂಬಂಧಿತ ತಂತ್ರಜ್ಞಾನಗಳು ಈಗ ಆಕಸ್ ಸಹಯೋಗದ ಒಂದು ಭಾಗವಾಗಲಿದೆ ಎಂದು ಆಸ್ಟ್ರೇಲಿಯಾ ಪ್ರಧಾನಿ ಮಾರಿಸನ್ ಅವರು ತಿಳಿಸಿದ್ದಾರೆ. ಇದೀಗ ಆಸ್ಟ್ರೇಲಿಯಾ ಮತ್ತು ಅಮೆರಿಕ ದೇಶಗಳು ಹೈಪರ್ಸಾನಿಕ್ ಬಗ್ಗೆ ಜತೆಯಾಗಿ ಕಾರ್ಯ ನಿರ್ವಹಿಸುತ್ತಿವೆ. ನೂತನ ತ್ರಿಪಕ್ಷೀಯ ಸಹಕಾರ ಒಪ್ಪಂದದಲ್ಲಿ ಹೊಸದಾಗಿದೆ ಎಂದಿದ್ದಾರೆ. * ಪ್ರಸ್ತುತ ಹೈಪರ್ಸಾನಿಕ್ ಅಸ್ತ್ರಗಳನ್ನು ಅಭಿವೃದ್ಧಿಗೊಳಿಸುವ 'ಸ್ಕಿಫಯರ್' ಕಾರ್ಯಕ್ರಮಕ್ಕೆ ಅತೀ ಶೀಘ್ರವೇ ಚಾಲನೆ ಲಭ್ಯವಾಗಲಿದೆ ಎಂದು 2020 ರ ಡಿಸೆಂಬರ್ ನಲ್ಲಿ ಆಸ್ಟ್ರೇಲಿಯಾ ಘೋಷಣೆ ಮಾಡಿದೆ. ಇದು ಅಧಿಕ ವೇಗದ, ದೀರ್ಘ ದೂರದ ದಾಳಿಯ ಸಾಮರ್ಥ್ಯವನ್ನು ಹೊಂದಿರುವ ಸೂಪರ್ಸಾನಿಕ್ ಕ್ಷಿಪಣಿ ಸಹಿತ, ರಕ್ಷಣಾ ವ್ಯವಸ್ಥೆಯ ಅಭಿವೃದ್ಧಿಗೆ ಸುಮಾರು 7 ಬಿಲಿಯನ್ ಡಾಲರ್ ಗಳಷ್ಟು ವಿನಿಯೋಗಿಸಲಾಗುತ್ತದೆ ಎಂದು ಆಸ್ಟ್ರೇಲಿಯಾ ಸರ್ಕಾರವು ಈ ಬಗ್ಗೆ ಮಾಹಿತಿ ನೀಡಿದೆ.