Job Description: * ಅಂತರರಾಷ್ಟ್ರೀಯ ಹಣಕಾಸು ನಿಧಿ (IMF)ಯು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ (PMGKAY)ಯು 2020 ನೇ ವರ್ಷದಲ್ಲಿನ ಸಾಂಕ್ರಾಮಿಕ ರೋಗ ಪೀಡಿತ ಸಮಯದಲ್ಲಿ ಭಾರತವು ಶೇ. 0.8 ರ ಕನಿಷ್ಠ ಮಟ್ಟದಲ್ಲಿ ಇರಿಸುವ ಮೂಲಕ 'ತೀವ್ರ ಬಡತನವನ್ನ ಅಕ್ಷರಶಃ ನಿರ್ಮೂಲನೆ ಮಾಡಿದೆ' ಎಂದು ಅಭಿನಂದನೆಯನ್ನು ತಿಳಿಸಿದೆ. * ಇತ್ತೀಚಿಗೆ 'IMF' ಪ್ರಕಟಿಸಿರುವ ಮಾಹಿತಿಯ ಪ್ರಕಾರ ಸಾಂಕ್ರಾಮಿಕ, ಬಡತನ ಹಾಗೂ ಅಸಮಾನತೆ, ಕೋವಿಡ್ -19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತದಲ್ಲಿ ಬಡತನದ ಮಟ್ಟವು ಸ್ಥಿರವಾಗಿದೆ ಎಂದು ತಿಳಿಸಿದ್ದಾರೆ. * 2019 ರ ಸಾಂಕ್ರಾಮಿಕ ಪೂರ್ವ ವರ್ಷದಲ್ಲಿ ತೀವ್ರ ಬಡತನವು ಶೇಕಡಾ 0.8 ರಷ್ಟಿತ್ತು. ಅದೇ ರೀತಿ 2020 ನೇ ವರ್ಷದಲ್ಲಿ ಆಹಾರ ವರ್ಗಾವಣೆಗಳು ಆರ್ಥಿಕ ಮಟ್ಟವನ್ನು ಕಡಿಮೆ ಮಟ್ಟದಲ್ಲಿ ಉಳಿಯುವುದನ್ನು ಖಚಿತಪಡಿಸಿಕೊಳ್ಳಲು ಇದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ. * 2020 ರ ಮಾರ್ಚ್ ನಲ್ಲಿ ಆರಂಭವಾಗಿರುವ 'PMGKAY' ಅಡಿಯಲ್ಲಿ ಕೇಂದ್ರ ಸರ್ಕಾರವು ಜನ ಸಾಮಾನ್ಯರಿಗೆ ತಿಂಗಳಿಗೆ 5 ಕಿಲೋಗ್ರಾಂ ಆಹಾರ ಧಾನ್ಯಗಳನ್ನ ಉಚಿತವಾಗಿ ನೀಡುತ್ತಿದೆ. ಹಾಗೆಯೇ ಹೆಚ್ಚುವರಿ ಉಚಿತ ಧಾನ್ಯವು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (NFSA) ಅಡಿಯಲ್ಲಿ ಪ್ರತಿ ಕಿಲೋಗ್ರಾಂಗೆ 2-3 ರೂ.ಗಳ ಹೆಚ್ಚಿನ ಸಬ್ಸಿಡಿ ದರದಲ್ಲಿ ಕಲ್ಪಿಸಲಾಗುವದು ಇದು ಈ ಮೊದಲು ನೀಡುವ ಧಾನ್ಯಕಿಂತಲೂ ಹೆಚ್ಚಾಗಿದೆ. * ಈ ಹಿಂದೆ 2016-17 ರ ಪ್ರಾರಂಭದಲ್ಲಿ ತೀವ್ರ ಬಡತನವು ಶೇ. 2 ರಷ್ಟು ಕಡಿಮೆ ಮಟ್ಟವನ್ನು ತಲುಪಿದೆ. ಬಡತನ ರೇಖೆಯ ಪ್ರಕಾರ ದಿನಕ್ಕೆ 3.2 USD, ಭಾರತದಲ್ಲಿ ಬಡತನವು 2019-20 ರ ಸಾಂಕ್ರಾಮಿಕ ಪೂರ್ವ ವರ್ಷದಲ್ಲಿ ಶೇಕಡಾ 14.8 ರಷ್ಟು ದಾಖಲಾಗಿದೆ ಎಂದು ವರದಿಯಾಗಿದೆ. * '2011-12 ರಲ್ಲಿ ಕಡಿಮೆ PPP USD 1.9 ಲೈನ್ನ ಅಧಿಕೃತ ಬಡತನದ ಮಟ್ಟವು ಶೇ. 12.2 ರಷ್ಟಿದೆ ಎಂದು ತಿಳಿಸಲಾಗಿದೆ.